- Advertisement -
Tumakuru News: ತಿಪಟೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಆಚರಣೆ ಮಾಡುತ್ತಿದ್ದು, ಈ ಹಿನ್ನೆಲೆ ಪಥಸಂಚಲನ ಏರ್ಪಡಿಸಲಾಗಿತ್ತು.
ತುಮಕೂರು ಜಿಲ್ಲೆ ತಿಪಟೂರು ನಲ್ಲಿ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಪ್ರಯುಕ್ತ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಆಕರ್ಷಕ ಪಥಸಂಚಲನ ಬೆಳಗ್ಗೆ ವಿನೋದ್ ಟಾಕೀಸ್ ಮೈದಾನದಿಂದ ಪ್ರಾರಂಭವಾಗಿ ಕೊಡಿ ಸರ್ಕಲ್ , ದೊಡ್ಡಪೇಟೆ ,ಕನ್ನಿಕಾ ಪರಮೇಶ್ವರಿ ದೇವಸ್ತಾನ ರಸ್ತೆ,ಅರಳಿಕಟ್ಟೆ ವೃತ್ತ,ಬಿ ಹೆಚ್ ರಸ್ತೆಮೂಲಕ ಗುರುಕುಲ ನಂದಾಶ್ರಮದ ಮಠದವರೆಗೆ ಪಥಸಂಚಲನ ನಡೆಯಿತು.
ಈ ಪಥಸಂಚಲನಕ್ಕೆ ಪೋಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂರ್ಧಭದಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ್, ಡಾ.ಶ್ರೀಧರ್,ಕೆ.ಟಿ.ಶಾಂತಕುಮಾರ್, ಪ್ರಮುಖರು ಪಾಲ್ಗೊಂಡಿದ್ದರು.
- Advertisement -