Tumakuru News: ಜಾತಿ ಜನಗಣತಿಯಲ್ಲಿ ಕಾಡುಗೊಲ್ಲ ಎಂದೇ ಬರಸಿ ದೊಡ್ಡೇಗೌಡರ ಕರೆ

Tumakuru News: ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಹತ್ತಿರ ಖಾಸಗಿ ಅಫೀಸಿನಲ್ಲಿ ಮಾತನಾಡಿದ ತುಮಕೂರು ಜಿಲ್ಲೆ ಕಾಡುಗೊಲ್ಲರ ಸಂಘದ ಜಾತಿ ಸಮೀಕ್ಷೆಯ ಉಸ್ತುವಾರಿ ದೊಡ್ಡೇಗೌಡರು, ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸರ್ವೆ ಕಾರ್ಯದ ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೊಲ್ಲ ಎಂದು ಬರಸಿ ದೊಡ್ಡೇಗೌಡರು ಕರೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಮನೆಗೆ ಬರುವ ಜಾತಿ ಗಣತಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡ ಬೇಡಿ. ರಾಜ್ಯ ಧ್ಯಕ್ಷರದ ಆದೇಶದ ಮೇರೆಗೆ ಹಳ್ಳಿ ಹಳ್ಳಿಯಲ್ಲಿ ಜಾತಿ ಗಣತಿಯ ಸಮೀಕ್ಷೆಯ ಅರಿವು ಮೂಡಿಸಬೇಕೆಂದು ಕರೆ ನೀಡಿದ್ದಾರೆ. ಅದರಂತೆ ನಾವು ಮುಂದಿನ ದಿನಗಳಲ್ಲಿ ಬ್ಯಾಲೆಟ್ ಪೇಪರ್ ಹಂಚುವ ಮೂಲಕ ಹಳ್ಳಿ ಹಳ್ಳಿಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಅಧ್ಯಕ್ಷರು ಬಾಲರಾಜು,ಉಪಾಧ್ಯಕ್ಷರು ಶಂಕ್ರಪ್ಪ ಶಕುನಗಿರಿ ಮತ್ತು ಜಯಣ್ಣ ಜಯಂತಿ ಗ್ರಾಮಸಂಘಟನಾ ಕಾರ್ಯದರ್ಶಿ ಮಹೇಂದ್ರ ಮತ್ತಿಹಳ್ಳಿ ಮತ್ತು ಶಶಿಧರ್ ಎಂ ಎಸ್ ಮಾವಿನಹಳ್ಳಿ ಸಂಘಟನಾ ಕಾರ್ಯದರ್ಶಿ ದಿನೇಶ್ ಮಾವಿನಹಳ್ಳಿ ಸಹ ಸಂಘಟನಾ ಕಾರ್ಯದರ್ಶಿ ತಮ್ಮಯ್ಯ ಮಡೆನೂರು ಗೊಲ್ಲರಹಟ್ಟಿಅಲೆಮಾರಿ ಅರೆ ಅಲೆಮಾರಿ ಸಲಹಾ ಸಮಿತಿ ಸದಸ್ಯರು ನಿರ್ದೇಶಕರು ಮನು ಕೊಳ್ಳಿಹಟ್ಟಿ ನಿರ್ದೇಶಕರು ಮಹೇಶ್ ಕೊಟ್ಟಿಗೆಹಳ್ಳಿ ನಿರ್ದೇಶಕರು ಶಂಕರ್ ಬೊಮ್ಮಲಾಪುರ ಕಾಡುಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತಿರಿದ್ದರು

About The Author