- Advertisement -
Tumakuru News: ತುಮಕೂರು: ತುಮಕೂರಿನಲ್ಲಿ ನಾಯಿ ಕಡಿತ ಮಿತಿ ಮೀರಿದ್ದು, ಕರ್ತವ್ಯ ನಿರತ ಹೆಡ್ ಕಾನ್ಸ್ಟೇಬಲ್ ಮೇಲೆ ನಾಯಿ ದಾಳಿ ಮಾಡಿದೆ. ತುಮಕೂರು ಗ್ರಾಮಾಂತರದ ಹಿರೇಹಳ್ಳಿ ಪಂಚಾಯಿತಿಯ ಚಿಕ್ಕಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ವೇಳೆ ಹೆಡ್ ಕಾನ್ಸ್ಟೇಬಲ್ ಗೆ ನಾಯಿ ಕಚ್ಚಿದೆ.
ತುಮಕೂರಿನ ಕ್ಯಾಸಂದ್ರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹನುಮ ರಂಗಯ್ಯ ಎಂಬ ಪೋಲೀಸ್ ಗೆ ನಾಯಿ ಕಡಿದಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
- Advertisement -