Tumakuru News: ಜಿ.ಪರಮೇಶ್ವರ್ ಸಿಎಂ ಆಗಲಿ: ವಿವಿಧ ಮಠಾಧೀಶರ ನೇತೃದಲ್ಲಿ ಹಕ್ಕೊತ್ತಾಯ

Tumakuru News: ತುಮಕೂರು: ತುಮಕೂರಿನಲ್ಲಿ ದಲಿತ ಸಿಎಂಗೆ ಬೇಡಿಕೆ ಹೆಚ್ಚಿದ್ದು, ದಲಿತ ಸಿಎಂಗೆ ಹೆಚ್ಚಿದ ಬೇಡಿಕೆ, ವಿವಿಧ ಮಠಾಧೀಶರ ನೇತೃದಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.

ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿರುವ ನೆಲಮಂಗಲ ತಾಲ್ಲೂಕಿನ ವನಕಲ್ಲು ಮಠದ ಶ್ರೀರಮಾನಂದ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಸಿಎಂ ಸ್ಥಾನ ನೀಡಿ. ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರಗೆ ಉಪಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಅತಿ ಹೆಚ್ಚು ಇನ ಉತ್ತರ ಕರ್ನಾಟಕದಿಂದ ಬರೋದ್ರಿಂದ, ಜಯದೇವ ಶಾಖೆಯನ್ನು ತುಮಕೂರಿನ ಶಿರಾದಲ್ಲಿ ಮಾಡಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.

ಶಿರಾ ಉತ್ತರ ಕರ್ನಾಟಕದ ಹೆಬ್ಬಾಗಿಲು. ಹಾಗಾಗಿ ಪರಮೇಶ್ವರ್ ಅವರನ್ನು ದಲಿತ ಮುಖ್ಯಮಂತ್ರಿ ಕೋಟಾದಡಿಯಲ್ಲಿ ಸಿಎಂ ಮಾಡಿ. ಇದುವರೆಗೂ ದಲಿತರನ್ನು ಸಿಎಂ ಮಾಡಿಲ್ಲ, ದಲಿತ ಮುಖ್ಯಮಂತ್ರಿ ಕೂಗೆನಿದೆ ಅದನ್ನು ಮಾಡಬೇಕು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ದಾಂತವನ್ನು ಅನುಷ್ಠಾನಕ್ಕೆ ತರಬೇಕೆಂದು ಸ್ವಾಮಿಜಿ ಒತ್ತಾಯಿಸಿದ್ದಾರೆ.

ಇದಾದ ಬಳಿಕ 30ಕ್ಕೂ ಹೆಚ್ಚು ಸ್ವಾಮೀಜಿಗಳು ಸೇರಿ ಮಹತ್ವದ ಸಭೆ ಕರೆದಿದ್ದು, ತುಮಕೂರಿನ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲಾಗಿದೆ.

About The Author