Friday, December 5, 2025

Latest Posts

Tumakuru News: ಹನುಮನ ಅಂಬಾರಿ ಹೊತ್ತ ತುಮಕೂರಿನ ಲಕ್ಷ್ಮಿ.

- Advertisement -

Tumakuru News: ಇಡೀ ಜಿಲ್ಲೆಯಲ್ಲೇ ಮೂರು ದಿನಗಳ ಕಾಲ ಹನುಮ ಜಯಂತಿ ಆಚರಣೆ ಮಾಡಿ ವಿಶೇಷತೆ ಮೆರೆದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಚೌಳಕಟ್ಟೆ ಗ್ರಾಮಸ್ಥರು.

ಅದ್ರಲ್ಲೂ ಕಡೆ ದಿನವಾದ ನಿನ್ನೇ ಹನುಮನ ಅಂಬಾರಿ ಮಾಡಿ ವಿಶೇಷತೆಯನ್ನು ಮೆರೆದಿದ್ದು ಹನುಮನ ಅಂಬಾರಿ ಮಹೋತ್ಸವಕ್ಕೆ ಹೊಸದುರ್ಗದ ಭಗೀರಥ ಪೀಠದ ಜಗದ್ದುರು ಶ್ರೀ ಪುರುಷೋತ್ತಮ ನಂದಪುರಿ ಮಹಾಸ್ವಾಮಿಗಳು ಚಾಲನೆ ನೀಡಿದರು.

ಗ್ರಾಮಸ್ಥರೇ ತಯಾರಿಸಿದ್ದ ಅಂಬಾರಿಯನ್ನ ಹೊತ್ತ ತುಮಕೂರಿನ ಲಕ್ಷ್ಮಿ ಹನುಮನ ಅಂಬಾರಿ ಮೆರವಣಿಗೆಯನ್ನ ಅದ್ದೂರಿಯಾಗಿ ಹೊತ್ತು ಸಾಗಿತ್ತು. ಅಷ್ಟೇ ಅಲ್ಲದೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಹನುಮನ ಅಂಬಾರಿ ನೋಡಲು ಗ್ರಾಮದ ಜನ ಮುಗಿಬಿದ್ದರಲ್ಲದೇ ಅಂಬಾರಿ ನೋಡಿ ಕಣ್ಣುತುಂಬಿಕೊಂಡರು.

ಇನ್ನೂ ಯಾವುದೇ ಅಚಾರ್ತಯವಾಗದಂತೆ ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖೆ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದು, ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಹನುಮ ಜಯಂತಿ ಜಾತ್ರಾಮಹೋತ್ಸವ ಅದ್ದೂರಿಯಾಗಿ ತೆರೆಕಂಡಿದೆ. ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಸಂಭ್ರಮಿಸಿದ್ರು.

- Advertisement -

Latest Posts

Don't Miss