Tumakuru News: ಚಿಕ್ಕನಾಯಕನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಪೋಸ್‌ಟ್ ಮುನಿಯಮ್ಮನ ಪಾಳ್ಯ ಗ್ರಾಮದಲ್ಲಿ 2 ಕಳ್ಳತನ ಪ್ರಕರಣಗಳು ವರದಿಯಾಗಿದೆ.
ಗ್ರಾಮದಲ್ಲಿರುವ ಶ್ರೀ ಮುನಿಯಮ್ಮದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಹುಂಡಿ ಒಡೆದು ಹಣ ಹಾಗೂ ಪೂಜಾ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಶ್ರೀ ಮುನಿಯಮ್ಮದೇವಿ ಸೇವಾ ಚಾರಿಟಬಲ್ಸ್ ಟ್ರಸ್ಟ್ ಕಮಿಟಿ ಅಧ್ಯಕ್ಷ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಯ್ಯ, ಸದಸ್ಯರು ಮಂಜುಳಾ, ಶ್ಯಾಮ್ ಸುಂದರ್ ಹಾಗೂ ಗ್ರಾಮಸ್ಥರು ಖಂಡನೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಅದೇ ಗ್ರಾಮದಲ್ಲಿರುವ ಪುಟ್ಟಯ್ಯ ಅವರ ಅಂಗಡಿಯಲ್ಲಿ ಕೂಡ ಕಳ್ಳತನ ನಡೆದಿದ್ದು, 3,000 ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಈ ಎರಡು ಕಳ್ಳತನ ಪ್ರಕರಣಗಳು ಗ್ರಾಮದಲ್ಲಿ ಆತಂಕ ಉಂಟುಮಾಡಿದ್ದು, ಸ್ಥಳೀಯರು ಪೊಲೀಸರು ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.