Tumakuru News: ತುಮಕೂರು: ತುಮಕೂರಿನ ತಿಲಕ್ ನಗರ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 6 ಪೆಡ್ಲರ್‌ಗಳನ್ನು ಸೆರೆಹಿಡಿದಿದ್ದಾರೆ.
ಬಂಧಿತರಿಂದ 11 ಲಕ್ಷ ಮೌಲ್ಯದ 8 ಕೆಜಿ ಗಾಂಜಾ, 78 ಸಾವಿರ ಬೆಲೆ ಬಾಳುವ MDMA ಹಾಗೂ 14 ಲಕ್ಷ ಮೌಲ್ಯದ 2 ಕಾರು ವಶ ಪಡಿಸಿಕ“ಂಡಿದ್ದಾರೆ. ಶೇಕ್ ಸಾಹಿಲ್( 24), ವಸೀಂ(27), ರೋಷನ್ ಸಮೀರ್( 29), ನಯೀಮ್ (38), ಫಾರೂಕ್ ಹುಸೇನ್ ( 45), ಶೊಯೆಬ್( 22) ಬಂಧಿತ ಪೆಡ್ಲರ್‌ಗಳಾಗಿದ್ದಾರೆ.
ಬಂದಿತರು ಬೆಂಗಳೂರು, ಮೈಸೂರು, ತುಮಕೂರು ಮೂಲದವರಾಗಿದ್ದು, ಛತ್ತಿಸ್ ಗಡ, ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳಿಂದ ಆಂಧ್ರ ಮೂಲಕ ತುಮಕೂರಿಗೆ ಗಾಂಜಾವನ್ನು ಅಕ್ರಮ ಸಾಗಾಣೆ ಮಾಡುತ್ತಿದ್ದರು. ಇದುವರೆಗೂ 70 ಕೆ ಜಿ ಗಾಂಜಾ, 55 ಗ್ರಾಂ MDMA ಅಕ್ರಮವಾಗಿ ಸೇಲ್ ಮಾಡಿದ್ದು, ವಿದ್ಯಾರ್ಥಿಗಳನ್ನೇ ಇವರು ಟಾರ್ಗೇಟ್ ಮಾಡುತ್ತಿದ್ದರು.
ಶಾಲಾ, ಕಾಲೇಜು ಆವರಣದಲ್ಲಿ ಹೆಚ್ಚು ಗಾಂಜಾ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದ್ದು, ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ, ಜಿಲ್ಲೆಯಲ್ಲಿ ಗಾಂಜಾ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.




