Tumakuru News: ತುಮಕೂರು: ಊರುಕೆರೆ ಬಳಿ ದಾವಣಗೆರೆ- ತುಮಕೂರು ರೈಲ್ವೆ ಕಾಮಗಾರಿ ಪರಿಶೀಲನೆ ಬಳಿಕ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾಧ್ಯಮದ ಜತೆ ಮಾತನಾಡಿದ್ದಾರೆ.
ಊರುಕೆರೆಯಿಂದ ಗುಬ್ಬಿ ಗೇಟ್ ವರೆಗೆ ಪರಿಶೀಲನೆ ಮಾಡಿದ್ದೇನೆ. 24 ಕಿ.ಮಿ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಅದರಲ್ಲಿ 13 ಕಿ ಮಿ ದಾಣಗೆರೆ ಮಾರ್ಗ ಹಾಗೂ 12 ಕಿಮಿ ಪಾವಗಡ ಮಾರ್ಗ. ಡಿ.25 ಕ್ಕೆ ರಾಷ್ಟ್ರದ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ ದಂದು ಉದ್ಘಾಟಿಸುವ ಚಿಂತನೆಯಲ್ಲಿದ್ದೇವೆ. ಅಧಿಕಾರಿಗಳ ಜೊತೆ ಸಾಕಷ್ಟು ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ದಿನಬಿಟ್ಟು ದಿನ ಇದನ್ನ ಅಧಿಕಾರಿಗಳ ಜೊತೆ ಮೇಲ್ವಿಚಾರಣೆ ಮಾಡಿದ್ರೆ, ನನಗೂ ಸ್ವಲ್ಪ ಕೆಲಸ ಆಗ್ತದೆ ಅನ್ನೊ ಸಮಧಾನ ಆಗ್ತದೆ. 2027 ಡೆಡ್ ಲೈನ್ ಆಗಿರುತ್ತದೆ, 2028 ವಿಧಾನಸಭಾ ಚುನಾವಣೆ ಇರಲಿದೆ. 400 ಕಿ ಮಿ ರೈಲ್ವೆ ಲೈನ್ ಲೋಕಾರ್ಪಣೆ ಗೊಳಿಸಲು ಪ್ರಧಾನಮಂತ್ರಿ, ಅಶ್ವಿನಿ ವೈಷ್ಣವ್ ಅವರು ತೀರ್ಮಾನ ಮಾಡಿದ್ದಾರೆ.
ಆ ಕೆಲಸವನ್ನ ತ್ವರಿತ ಗತಿಯಲ್ಲಿ ಮಾಡಲಿಕ್ಕೆ ಪದೇ ಪದೇ ಅಧಿಕಾರಿಗಳ ಮೀಟಿಂಗ್ ಗಳನ್ನ ಮಾಡ್ತಿರುತ್ತೇವೆ. ದೂರವಾಣಿ ಸಂಪರ್ಕದಲ್ಲಿದ್ದು ದಿನನಿತ್ಯದ ವ್ಯವಸ್ಥೆ ಮಾಡ್ತಿರುತ್ತೇವೆ. ಜಿಲ್ಲಾಡಳಿತ ಶಾಸಕರು ಸಹಕಾರಿಂದ ಇದೊಂದು ಅತ್ಯುತ್ತಮವಾದ ಕೆಲಸ. ರೈಲ್ವೆ ಇಲಾಖೆಯಲ್ಲಿ, ಏನೆಲ್ಲಾ ಮಾಡುತ್ತೆ ಎನ್ನುವುದಕ್ಕೆ, ಒಂದು ವರ್ಷದಲ್ಲಿನ ಬೆಳವಣಿಗೆ ಸಾಕ್ಷಿ. ಇದು ನನಗೆ ತೃಪ್ತಿಕೊಟ್ಟಿದೆ. ಇದನ್ನ ಮುಂದುವರಿಸೋ ಕೆಲಸ ಮಾಡ್ತಿವಿ. ಮೈದಾಳದ ಗೂಡ್ಸ್ ಟರ್ಮಿನಲ್ ಶಿಫ್ಟ್ ಮಾಡಲು ಚಿಂತನೆ ನಡೆದಿದೆ ಎಂದು ಸೋಮಣ್ಣ ಹೇಳಿದ್ದಾರೆ.

