Tumakuru: ವಿದ್ಯಾರ್ಥಿ, ರೈತರು, ಗ್ರಾಮಸ್ಥರಿಗೆ ಸರಿಯಾದ ಬಸ್ ನಿಲ್ದಾಣದ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Tumakuru: ತಿಪಟೂರು: ತಾಲ್ಲೂಕಿನ ಬೆಂಗಳೂರು ಮಾರ್ಗವಾಗಿ ಹೋಗುವ ಬೆಟ್ಟದ ಗೇಟ್ ರಜತಾದ್ರಿಪುರ ಯಗಚಿಗಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ರೈತರಿಗೆ ವಿದ್ಯಾರ್ಥಿಗಳಿಗೆ ಅಂಡರ್ ಪಾಸ್ • ಸರ್ವಿಸ್ ರಸ್ತೆ,ಬಸ್ ನಿಲ್ದಾಣ ಸೌಕರ್ಯವಿಲ್ಲದ ಕಾರಣ, ವಿಭಾಗೀಯ ಅಧ್ಯಕ್ಷರಾದ ಯಗಚಿಗಟ್ಟೆ ರಾಘವೇಂದ್ರ, ಶಿವಕುಮಾರ್ ಮತ್ತಿಘಟ್ಟ, ರಮೇಶ್ ಸೇರಿದಂತೆ ಆಟೋ ಚಾಲಕರು ಗ್ರಾಮಸ್ಥರು ವಿದ್ಯಾರ್ಥಿಗಳು ಬೆಟ್ಟದ ಗೇಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಘವೇಂದ್ರ ಯಗಚಿಗಟ್ಟೆ, ಬೆಟ್ಟದ ಗೆಟ್ ರಜದಾದ್ರಿಪುರ ಗೇಟ್ ನಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ಬೆಟ್ಟದ ರಜತಾದ್ರಿಪುರ ಗೇಟ್ ನಲ್ಲಿ ಅಂಡರ್ ಪಾಸ್ ಸರ್ವಿಸ್ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ರೈತರು ಸಾರ್ವಜನಿಕರು ಸಾವು ಬದುಕಿನ ನಡುವೆ ಜೀವ ಬಿಗಿದುಕೊಂಡು ರಸ್ತೆ ದಾಟುತ್ತಾ ಒನ್ ವೇ ಅಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನಾದರೂ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಈ ಅವ್ಯವಸ್ಥೆ ರಸ್ತೆಯಿಂದ ಸಾವು ನೋವುಗಳಾದರೆ, ನೇರವಾಗಿ ಸಂಬಂಧ ಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಿರಿ ಎಂದು ಎಚ್ಚರಿಸಿದ್ದಾರೆ. ಅಲ್ಲದೇ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗ್ರಾಮಸ್ಥರಿಗೆ ರೈತರಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದ್ದರು.

ನಂತರ ಮಾತನಾಡಿದ ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ, ಯಗಚಿಗಟ್ಟೆ ರಜತಾದ್ರಿಪುರ ಗೇಟ್ ನಲ್ಲಿ ರಸ್ತೆ ದಾಟಲು ಅಂಡರ್‌ ಪಾಸ್ ಇಲ್ಲದೆ, ಬ್ಯಾರಿಕೆಟ್ ದಾಟಿ ವಿದ್ಯಾರ್ಥಿಗಳು, ರೈತರು, ವೃದ್ಧರು ದಿನನಿತ್ಯ ರಸ್ತೆದಾಟಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಗೇಟ್ ಗಳಲ್ಲಿ ಸರಿಯಾಗಿ ತಗ್ಗುದಾಣವಿಲ್ಲ ಇನ್ನಾದರೂ ಕೂಡ, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕೊಪ್ಪ ಶಾಂತಪ್ಪ,ರಮೇಶ್ ಮಾರನಗೆರೆ ತುರುವೇಕೆರೆ ರಂಗಸ್ವಾಮಿ ಪ್ರಕಾಶ್ ಅಶೋಕ್ ಸೇರಿದಂತೆ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು ಆಟೋ ಚಾಲಕರು ಗ್ರಾಮಸ್ಥರು ರೈತರು ಭಾಗವಹಿಸಿದ್ದರು.

About The Author