Tumakuru News: ತುಮಕೂರು: ತುಮಕೂರು ಹೊರವಲಯದ ಪಂಡಿತನಹಳ್ಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಮಾತನಾಡಿರುವ ಶಾಸಕ ಸುರೇಶ್ ಗೌಡ, ಕೇಂದ್ರ ಸಚಿವ ಸೋಮಣ್ಣ ಅವರಿಗೆ ಸಿಎಂ ಆಗೋ ಎಲ್ಲ ಅರ್ಹತೆಗಳಿದೆ ಎಂದಿದ್ದಾರೆ.
ಕೇಂದ್ರದ ಮಂತ್ರಿ ಕೈಗೆ ಸಿಗೋದೇ ಕಷ್ಟ. ರಾಜ್ಯದ 28 ಸಂಸದರನ್ನ ನಾನೂ ನೋಡಿದ್ದೇನೆ. ರಾಜಕೀಯ ಅನುಭವದಲ್ಲಿ ಸಾಕಷ್ಟು ನಾಯಕರನ್ನ ನೋಡಿದ್ದೇನೆ. ಎಷ್ಟೋ ಸಂಸದರು ಪೋನೇ ರಿಸೀವ್ ಮಾಡಲ್ಲ. ಸೋಮಣ್ಣ ಅವರಂತಹ ಸಂಸದರನ್ನ ಪಡೆದಿರೋದಕ್ಕೆ ತುಮಕೂರಿನ ಜನ್ರು ಪುಣ್ಯ ಮಾಡಿದ್ದೇವೆ. ಏನೇ ಇದ್ರೂ ನೇರಾ-ನೇರಾ ಹೇಳ್ತಾರೆ. ನಾನು ಧೈರ್ಯವಾಗಿ ಹೇಳ್ತೇನೆ. ನನಗೇನೂ ಭಯ ಇಲ್ಲ. ಮುಖ್ಯಮಂತ್ರಿ ಆಗೋ ಅರ್ಹತೆಗಳು ಸೋಮಣ್ಣ ಅವರಿಗೆ ಇದೆ.
ಎಲ್ಲೋ ಒಂದು ಕಡೆ ಚಿಕ್ಕಾಪುಟ್ಟ ನೇರಾ-ನೇರ ಮಾತುಗಳಿಂದ ಅವರಿಗೆ ತಪ್ಪಿದೆ. ಮುಂದಿನ ದಿನಗಳಲ್ಲಿ ಅವರಿಗೆ ಖಂಡಿತಾ ಬರಲಿದೆ. ಕರ್ನಾಟಕ ರಾಜ್ಯದಲ್ಲಿ ಸಮರ್ಥ ನಾಯಕನನ್ನ ಹುಡುಕುತ್ತಿದ್ದಾರೆ. ಈ ರೀತಿ ಕೆಲಸ ಮಾಡುವ ಸಮರ್ಥ ನಾಯಕ ನಮ್ಮ ರಾಜ್ಯಕ್ಕೆ ಬೇಕು. ನಾನು ಹೆಮ್ಮೆಯಿಂದ ಹೇಳ್ತೇನೆ. ಸೋಮಣ್ಣ ಅವರನ್ನ ಹೊಗಳುವುದಕ್ಕೆ ಹೇಳ್ತಿಲ್ಲ. ಇಂತಹ ನಾಯಕ ರಾಜ್ಯಕ್ಕೆ ಬೇಕು. ಕೆಲಸ ಮಾಡುವಂತಹ ನಾಯಕ ಬೇಕು. ಕರ್ನಾಟಕ ದೇಶದಲ್ಲೇ ನಂಬರ್ ಒನ್ ರಾಜ್ಯ ಆಗಲು ಇಂತಹ ಕಳಕಳಿ ಇರುವ ನಾಯಕ ಬೇಕು ಎಂದು ಸುರೇಶ್ ಗೌಡ ಹೇಳಿದ್ದಾರೆ.




