ದೆಹಲಿ: ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ. ಭಾರತದಲ್ಲಿ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದಾರೆ ಎಂದು ಟ್ವಿಟರ್ ಇಂಡಿಯಾ ನೌಕರರೊಬ್ಬರು ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಮಾಡುವ ಕಷ್ಟದ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಲಿದ್ದೇವೆ ಎಂದು ಕಂಪನಿಯ ನೌಕರಿಗೆ ಈ ಮೊದಲು ತಿಳಿಸಿತ್ತು. ಟ್ವಿಟರ್ ಕಂಪನಿಯು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಹಲವು ಬಾರಿ ವಾಗ್ವಾದ ನಡೆಸಿದೆ. ಈಗ ಕಂಪನಿಯು ಗೌಪ್ಯ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳ ಜೊತೆ ಮಾತುಕತೆ ನಡೆಸಬಾರದೆಂದು ನೌಕರರಿಗೆ ಎಚ್ಚರಿಸಿದೆ.
ಬಂಧಿಸಲು ಹೋದ ಪೋಲೀಸರ ಮೇಲೇ ಹಲ್ಲೆ; ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿ ಕಾಲಿಗೆ ಗುಂಡು