ಅಂತರಾಷ್ಟ್ರೀಯ ಸುದ್ದಿ: ಟ್ವಿಟರ್ ನ ಆಪ್ ಅನ್ನು ಖರೀದಿ ಮಾಡಿದ ನಂತರ ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಈಗ ಚಿಹ್ನೆಯನ್ನೆ ಬದಲಾಯಿಸಿದ್ದಾರೆ ಅದೇ ಕಪ್ಪು ಬಣ್ಣದ ಎಕ್ಸ್ ಚಿಹ್ನೆ
ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೈಗೆ ಟ್ವಿಟರ್ ಹೋದ ನಂತರ, ಈ ಅಪ್ಲಿಕೇಶನ್ನಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗೆ, ಟ್ವಿಟರ್‌ನ ಬ್ಲೂಬರ್ಡ್ ಲೋಗೋ ಕಣ್ಮರೆಯಾಗಿದೆ. ಟ್ವಿಟರ್ ಇಸೀಗ ಹಕ್ಕಿ ಬದಲಿಗೆ “ಘಿ” ಎಂದು ಮರುನಾಮಕರಣಗೊಂಡಿದೆ. ಅಸ್ತಿತ್ವದಲ್ಲಿರುವ ಟ್ವಿಟರ್ ಬ್ಲೂಬರ್ಡ್ ಲೋಗೋವನ್ನು ಎಕ್ಸ್ ಲೋಗೋದಿಂದ ಬದಲಾಯಿಸಲಾಗಿದೆ.
ಕಪ್ಪು ಬಣ್ಣದ ‘X’ ಲೋಗೋ: ಟ್ವಿಟರ್ ಹೇಳಿದಂತೆ ಇಂದು ಹಕ್ಕಿಯ ಜಾಗದಲ್ಲಿ ಎಕ್ಸ್ ಅಕ್ಷರ ಬಂದಿದೆ. ಎಕ್ಸ್ ಅಕ್ಷರವನ್ನು ಸಾಮಾನ್ಯವಾಗಿ ಸಾಮರ್ಥ್ಯ, ಸಾಧ್ಯತೆಗಳು ಮತ್ತು ಹೊಸ ಆರಂಭಗಳ ಸಂಕೇತವಾಗಿ ನೋಡಲಾಗುತ್ತದೆ. ಮಸ್ಕ್ ಈಗಾಗಲೇ ಈ ಲೋಗೋವನ್ನು Sಠಿಚಿಛಿeಘಿ ನಲ್ಲಿ ಬಳಸಿದ್ದಾರೆ. ಮತ್ತು, ಈ ಲೋಗೋವನ್ನು ಟ್ವಿಟರ್ ಪ್ರಧಾನ ಕಛೇರಿಯಲ್ಲಿ ಮೊದಲಿಗೆ ಪ್ರದರ್ಶಿಸಲಾಯಿತು.
ಭವಿಷ್ಯದಲ್ಲಿ ‘ಎಕ್ಸ್ ಪ್ಲಾಟ್‌ಫಾರ್ಮ್ ಮೂಲಕ ಆಡಿಯೋ ಮತ್ತು ವಿಡಿಯೋ ಮೂಲಕ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಲಿಂಡಾ ಯಾಕಾರಿನೊ ಹೇಳಿದ್ದಾರೆ. ಅದೇ ರೀತಿ ಮೆಸೇಜ್ ಮಾಡುವ ಫೀಚರ್, ಪೇಮೆಂಟ್/ಬ್ಯಾಂಕಿಂಗ್‌ನಂತಹ ವಿವಿಧ ಸೇವೆಗಳು ಸಹ ಲಭ್ಯವಾಗಲಿವೆ. ಇದು ಬಳಕೆದಾರರಿಗೆ ಪರಸ್ಪರ ಸಂವಹನ ನಡೆಸಲು, ಆಲೋಚನೆಗಳನ್ನು ಹಂಚಿಕೊಳ್ಳಲು, ಸರಕು ಮತ್ತು ಸೇವೆಗಳನ್ನು ವ್ಯಾಪಾರ ಮಾಡಲು ಸಹ ಒಂದು ವೇದಿಕೆಯಾಗಲಿದೆ.
Dollfin : ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸ್ ದಾಖಲು..!
Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ