ಮಂಡ್ಯದಲ್ಲಿ ಇಬ್ಬರು ಕೊರೊನಾ ವಾರಿಯರ್ಸ್ ಡಿಸ್ಚಾರ್ಜ್: ಜಿಲ್ಲಾಡಳಿತದಿಂದ ಗೌರವದ ಬೀಳ್ಕೊಡುಗೆ..

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ವಾರಿಯರ್ಸ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೆ.ಆರ್‌.ಪೇಟೆಯ ಮುಖ್ಯ ಪೇದೆ ಮತ್ತು ಮಳವಳ್ಳಿ CDPO ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾ ವಾರಿಯರ್ಸ್ ಸೇರಿ ೨೦ ಜನರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

https://youtu.be/Ld_zp4HPgdk

ಇನ್ನು ಡಿಸ್ಚಾರ್ಜ್ ಆಗಿ ಹೋಗುವಾಗ ಕೊರೊನಾ ವಾರಿಯರ್ಸ್‌ಗೆ ಜಿಲ್ಲಾಡಳಿತ ಗೌರವದೊಂದಿಗೆ ಬೀಳ್ಕೊಟ್ಟಿದೆ. ಕೊರೊನಾ ವಾರಿಯರ್ಸ್‌ಗೆ ಮಿಮ್ಸ್ ಆಸ್ಪತ್ರೆಯಲ್ಲೇ ಸನ್ಮಾನ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

https://youtu.be/akHUKTOeOt0

About The Author