Sunday, September 8, 2024

Latest Posts

Manipur ವಿಧಾನಸಭಾ ಚುನಾವಣೆಯ ಹಿಂಸಾತ್ಮಕ ಗಲಭೆಯಲ್ಲಿ ಇಬ್ಬರು ಸಾವು..!

- Advertisement -

ಎರಡನೇ ಹಾಗೂ ಅಂತಿಮ ಸುತ್ತಿನ ಮತದಾನವು ಮಣಿಪುರದಲ್ಲಿ (Manipura) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಯಿತು. ಈ ಚುನಾವಣೆಯು ಆರು ಜಿಲ್ಲೆಗಳ ಒಟ್ಟು 22 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿದೆ. ಥೌಬಲ್, ಚಾಂಡೇಲ್, ಉಖ್ರುಲ್, ಸೇನಾಪತಿ, ತಮೇಂಗ್ಲಾಂಗ್ ಹಾಗೂ ಜಿರಿಬಮ್ (Thoubal, Chandel, Ukhrul, Senapati, Tamenglong and Jiribam) ಜಿಲ್ಲೆಗಳಾದ್ಯಂತ ಒಟ್ಟು 8.38 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ತಿಳಿಸಿದ್ದಾರೆ. ಇದಕ್ಕೂ ಮುಂಚೆ, ಮತದಾನ ಪ್ರಾರಂಭವಾದ ಸ್ವಲ್ಪ ಸಮಯದಲ್ಲೇ ಬಿಜೆಪಿಯಿಂದ ಉಚ್ಛಾಟಿತರಾದ ನಾಯಕರೊಬ್ಬರ ಮನೆಯ ಮುಂದೆ ಕಚ್ಚಾ ಬಾಂಬ್ ಒಂದು ಸ್ಫೋಟಿಸಿದ್ದು ಈ ನಡುವೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಿಜೆಪಿ ಬೆಂಬಲಿಗನೊಬ್ಬನ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ನಂತರ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು ಹಲವೆಡೆಗಳಿಂದ ಗಲಭೆಯುಂಟಾದ ಸುದ್ದಿಗಳು ಕೇಳಿಬರುತ್ತಿವೆ. ಪೊಲೀಸರು ನೀಡಿರುವ ಹೇಳಿಕೆಯಂತೆ 25 ವರ್ಷ ಪ್ರಾಯದ ಎಲ್. ಅಮುಬಾ ಸಿಂಗ್ (L. Amuba Singh) ಎಂಬಾತನ ಮೇಲೆ ಗುಂಡು ಹಾರಿಸಲಾಗಿದ್ದು ಆತನನ್ನು ತಕ್ಷಣ ಅಸ್ಪತ್ರೆಗೆ ಸೇರಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಈಗ ಹಿಂಸಾತ್ಮಕ ಗಲಭೆಯಲ್ಲಿ ಮತ್ತೋರ್ವ ವ್ಯಕ್ತಿಯ ಸಾವಿನ ಸುದ್ದಿ ಇನ್ನೊಂದು ಪ್ರತ್ಯೇಕ ಸ್ಥಳದಿಂದ ವರದಿಯಾಗಿದೆ. ಹಿಂಸಾತ್ಮಕ ಗಲಭೆಯಲ್ಲಿ ಎರಡು ಜನರು ಮೃತರಾದ ವರದಿ ಬಂದಿದೆ. ಮೊದಲನೆಯ ಘಟನೆಯು ಥೌಬಲ್ ಜಿಲ್ಲೆಯಿಂದ ವರದಿಯಾಗಿದ್ದರೆ ಎರಡನೇ ಘಟನೆಯು ಸೇನಾಪತಿಯಿಂದ ವರದಿಯಾಗಿದೆ. ಬೆಳಗ್ಗೆ 11 ಗಂಟೆಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಒಟ್ಟಾರೆಯಾಗಿ ಶೇ. 28.18 ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ. ಪಸ್ತುತ ಮಣಿಪುರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ COVID-19 ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿರುವ 1,247 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಾಜೇಶ್ ಅಗರ್ವಾಲ್ ಅವರು ತಿಳಿಸಿದ್ದರು.

- Advertisement -

Latest Posts

Don't Miss