Manipur : ವಿಧಾನಸಭೆ ಎರಡನೇ ಹಂತದ ಚುನಾವಣೆ 1ಗಂಟೆಯವರೆಗೆ ಶೇ.47.16ರಷ್ಟು ಮತದಾನ..!

ಮಣಿಪುರ (Manipur) ರಾಜ್ಯದಲ್ಲಿ ಇಂದು (ಮಾರ್ಚ್ 5ರಂದು) ಎರಡನೇ ಹಂತದಲ್ಲಿ ವಿಧಾನಸಭೆ ಚುನಾವಣೆಗೆ (For Assembly elections) ಮತದಾನ ಪ್ರಕ್ರಿಯೆ ನಡೆಯಲಿದೆ. ಮಣಿಪುರ ವಿಧಾನಸಭೆ ಚುನಾವಣೆಗೆ ಆಯೋಗ (Commission for Elections) ಸಕಲ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಿಂದೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಿಗದಿಯಾಗಿತ್ತು. ನಂತರ ಚುನಾವಣಾ ದಿನಾಂಕ ಪರಿಷ್ಕರಿಸಲಾಗಿತ್ತು. ಮಣಿಪುರದ 6 ಜಿಲ್ಲೆಗಳ ಒಟ್ಟು 22 ವಿಧಾನಸಭೆ ಕ್ಷೇತ್ರಗಳಿಗೆ (For a total of 22 assembly constituencies in 6 districts) ಶನಿವಾರ ಮತದಾನ ನಡೆಯಲಿದ್ದು, ಮಾರ್ಚ್ 3ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ತೌಬಲ್, ಜಿರಿಬಾಮ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡನೇ ಹಂತದ ಚುನಾವಣಾ ಮತದಾನ ನಡೆಯಲಿದೆ. ಈ ಬಾರಿ ಮಣಿಪುರ ಚುನಾವಣೆ 2022ರ ಎರಡನೇ ಹಂತದಲ್ಲಿ 425,192 ಮಹಿಳೆಯರು ಮತ್ತು 407,224 ಪುರುಷರು ಸೇರಿದಂತೆ ಸುಮಾರು 8.3 ಲಕ್ಷ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಮಣಿಪುರ ವಿಧಾನಸಭೆ ಎರಡನೇ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.47.16ರಷ್ಟು ಮತದಾನವಾಗಿದೆ.

About The Author