ಇವತ್ತು ನಾವು ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿಯನ್ನ ಹೇಳಲಿದ್ದೇವೆ. ಈ ಹಿಂದೆ ಹೇಳಿದ ರೆಸಿಪಿಯಲ್ಲಿ ನಾವು ನಿಂಬೆರಸ, ಉಪ್ಪು, ಡ್ರೆಸ್ಸಿಂಗ್ಸ್, ಡ್ರೈಫ್ರೂಟ್ಸ್ ಬಳಸಲು ಹೇಳಿದ್ದೆವು. ಆದ್ರೆ ಇಂದು ಹೇಳುವ ಸ್ಯಾಲೆಡ್‌ನಲ್ಲಿ ಈ ಪದಾರ್ಥಗಳನ್ನ ಬಳಕೆ ಮಾಡುವಂತಿಲ್ಲ. ಯಾಕಂದ್ರೆ ಇದು ಡೆಟಾಕ್ಸ್ ಸ್ಯಾಲೆಡ್. ನಿಮ್ಮ ದೇಹ ಸರಿಯಾಗಿ ನಿರ್ವಿಷಿಕರಣಗೊಳ್ಳಬೇಕು ಅಂದ್ರೆ ನೀವು ಸ್ಯಾಲೆಡ್‌ನಲ್ಲಿ ಈ ಪದಾರ್ಥವನ್ನ ಬಳಸಬಾರದು. ಹಾಗಾದ್ರೆ ಈ ಆರೋಗ್ಯಕರ ಸ್ಯಾಲೆಡ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಸೌತೇಕಾಯಿ, ಒಂದು ಕ್ಯಾಪ್ಸಿಕಂ, ಒಂದು ಸ್ಪೂನ್ ಎಳ್ಳು, ಕೊಂಚ ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಕೊಬ್ಬರಿ ತುರಿ. ಇವಿಷ್ಟು ಈ ಸ್ಯಾಲೆಡ್‌ಗೆ ಬೇಕಾಗುವ ಸಾಮಗ್ರಿ. ಟೋಮೆಟೋ, ಕ್ಯಾರೆಟ್, ಸೌತೇಕಾಯಿ, ಕ್ಯಾಪ್ಸಿಕಂನ್ನು ಸಣ್ಣದಾಗಿ ಹೆಚ್ಚಿ ಒಂದು ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಕೊಬ್ಬರಿ ತುರಿ, ಎಳ್ಳು ಹಾಕಿ ಮಿಕ್ಸ್ ಮಾಡಿ. ನೆನಪಿರಲಿ ಈ ಸ್ಯಾಲೆಡ್‌ಗೆ ನೀವು ಉಪ್ಪು, ನಿಂಬೆರಸವೆಲ್ಲ ಹಾಕಬಾರದು.
ಎರಡನೇಯ ಸ್ಯಾಲೆಡ್‌ಗೆ ಅರ್ಧ ಬೀಟ್‌ರೂಟ್, ಒಂದು ಕಪ್ ರಾಕೇಟ್ ಲೀವ್ಸ್, ಒಂದು ಕಪ್ ಪಾಲಕ್ ಸೊಪ್ಪು, ಮೂರರಿಂದ ನಾಲ್ಕು ವಾಲ್ನಟ್, ಅರ್ಧ ಕಪ್ ಕೊಬ್ಬರಿ ತುರಿ ಬೇಕು. ಮೊದಲು ಬೀಟ್‌ರೂಟ್‌್ನ್ನು ತುಂಡರಿಸಿ ಕೊಂಚ ಹೊತ್ತು ಬೇಯಿಸಿ. ನಂತರ ರಾಕೇಟ್ ಲೀವ್ಸ್, ಪಾಲಕನ್ನು ಸಣ್ಣದಾಗಿ ಹೆಚ್ಚಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಬೇಯಿಸಿದ ಬೀಟ್‌ರೂಟ್ ಸೇರಿಸಿ. ಜೊತೆಗೆ ಕೊಬ್ಬರಿ ತುರಿ, ನಾಲ್ಕು ವಾಲ್ಟನ್ನ ಸಣ್ಣಗೆ ತುಂಡರಿಸಿ ಮಿಕ್ಸ್ ಮಾಡಿದ್ರೆ, ಸಲಾಡ್ ರೆಡಿ. ಇದಕ್ಕೆ ನೀವು ಕೊಂಚ ನಿಂಬೆರಸ, ಮತ್ತು ಉಪ್ಪು, ಎರಡರಿಂದ ಮೂರು ಖರ್ಜೂರದ ತುಂಡುಗಳನ್ನು ಬಳಸಬಹುದು.