ಪೊಲೀಸರು ಅಂದ್ರೆ ಲಂಚಬಾಕರು, ದೌರ್ಜನ್ಯ ಮಾಡ್ತಾರೆ. ರೌಡಿಗಳ ತರಹ ದಬ್ಬಾಳಿಕೆ ಮಾಡ್ತಾರೆ ಅನ್ನೋ ಆರೋಪಗಳೆಲ್ಲಾ ಇರೋದೇ. ಆದರೆ ಎಲ್ಲ ಪೊಲೀಸರೂ ಹಂಗೆ ಇರಲ್ಲ ಅನ್ನೋದು ಸತ್ಯಾನೇ. ಹಾಗೆ ನೋಡಿದ್ರೆ ಕಷ್ಟಪಟ್ಟು ಕೆಲಸ ಮಾಡೋ ಪೊಲೀಸರೇ ಹೆಚ್ಚಿದ್ದಾರೆ. ಎಷ್ಟೋ ಪೊಲೀಸರು ಒಂದು ದಿನ ರಜೆಗೂ ಪರದಾಡ್ತಾರೆ ಅನ್ನೋದು ಇತ್ತೀಚೆಗೆ ಒಂದು ಲೀವ್ ಲೆಟರ್‌ನಿಂದ ವೈರಲ್ ಆಗಿದೆ.
ಬೆಂಗಳೂರಿನ ಸೆಂಟ್ರಲ್ ಕ್ರೆöÊಂ ಬ್ರಾö್ಯಂಚ್ ಪೊಲೀಸ್ ಪೇದೆಯೊಬ್ಬರು ಒಂದು ದಿನದ ಮಟ್ಟಿಗೆ ಹೆಂಡತಿಯ ಜೊತೆ ವಾಯುವಿಹಾರ ಹಾಗು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ವೀಕ್ಲೀ ಆಫ್ ಬೇಕು ಅಂತ ಮನವಿ ಪತ್ರ ಕೊಟ್ಟಿದ್ದಾರೆ. ಇದಕ್ಕೆ ಮೇಲಧಿಕಾರಿ ರಜೆಯನ್ನು ಕೊಟ್ಟಿದ್ದಾರೆ. ಆದರೆ ಪೊಲೀಸರ ಬದುಕು ಎಷ್ಟು ಒತ್ತಡದಲ್ಲಿರುತ್ತೆ ಅನ್ನೋದಕ್ಕೆ ಪತ್ರದಲ್ಲಿ ಪತ್ನಿ ಜೊತ ವಾಯು ವಿಹಾರ ಹೋಗೋಕೆ ಮತ್ತು ಸಿನಿಮಾ ನೋಡೋಕೆ ರಜೆ ಬೇಕು ಅಂತ ಪ್ರಾಮಾಣಿಕವಾಗಿ ಬರೆದಿರುವ ಪೊಲೀಸ್ ಸಾಕ್ಷಿಯಾಗಿದ್ದಾರೆ.
ಲೀವ್ ಲೆಟರ್‌ನಲ್ಲಿ ಬರೀ ಲೀವ್ ಅಂತೆ ಬರೆಯೋ ಬದಲು ಕಾರಣಗಳನ್ನು ಬರೆದಿರೋ ನೋಡೋರಿಗೆ ತಮಾಷೆ ಅನಿಸಬಹುದು ಆದ್ರೆ ಪ್ರಾಮಾಣಿಕವಾಗಿ ರಜೆ ಯಾಕೆ ಬೇಕು ಅಂತ ಬರೆದಿರುವ ಪೊಲೀಸ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗ್ತಿದೆ, ಜೊತೆಗೆ ಒತ್ತಡದಲ್ಲಿ ಕೆಲಸ ಮಾಡೋ ಪ್ರಾಮಾಣಿಕ ಪೊಲೀಸರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗ್ತಿದೆ.
ಓಂ
ಕರ್ನಾಟಕ ಟಿವಿ