ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಲಾವಿದರು ಸಖತ್ ಅಪ್ಡೇಟ್ ಆಗುತ್ತಿದ್ದು, ಸಾಮಾನ್ಯರನ್ನು ಸೂಜಿಗಪಡಿಸುವಂತೆ ಮಾಡುತ್ತಿದೆ.. ಸಾಮಾನ್ಯವಾಗಿ ನೀವು ಪೇಂಟಿಂಗ್ ಕೇಳಿದ್ದಿರ…ಪೆನ್ಸಿಲ್ ನಲ್ಲಿ ಸ್ಕೆಚ್ ಮಾಡುವುದನ್ನು ನೋಡಿದ್ದೀರಾ….ಆದ್ರೆ ಟೈಪಿಂಗ್ ಮಿಷನ್ ನಲ್ಲಿ ಚಿತ್ರ ಬಿಡಿಸುವುದನ್ನು ಕೇಳಿದ್ದೀರಾ? ನೋಡಿದ್ದೀರಾ? ಆಗಿದ್ರೆ ಈ ಕಲರ್ ಫುಲ್ ಸುದ್ದಿ ನೋಡಿ…
ಟೈಪಿಂಗ್ ಮಿಷನ್ನಲ್ಲೇ ಮಹತ್ ವ್ಯಕ್ತಿ ಮತ್ತು ಪ್ರಾಣಿಗಳ ಚಿತ್ರ ಬಿಡಿಸುವುದನ್ನ ನೀವು ಎಂದಾದ್ರು ನೋಡಿದ್ದೀರಾ ಕೇಳಿದ್ದಿರಾ? ಈಗ ಈ ವಿಶೇಷ ಕಲೆಯನ್ನ ಕಂಪ್ಯೂಟರ್ ಆಪರೇಟರ್ ಆಗಿದ್ದ ಗುರುಮೂರ್ತಿ ಮಾಡುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ…ಇದನ್ನೂ ಓದಿ: https://karnatakatv.net/jail-fix-for-challenging-star-till-2027-dharshan/
ತಮ್ಮ ೭೫ ವರ್ಷದಲ್ಲೂ ಛಲಬಿಡದ ಗುರುಮೂರ್ತಿ ವಿಶ್ವ ದಾಖಲೆ ಮಾಡಿದ ಸ್ಟೋರಿ ಇದು..೫ ಮತ್ತೆ ೬ ನೇ ವರ್ಷಕ್ಕೆ ಪೆನ್ಸಿಲ್ ಸ್ಕೆಚ್ ಮಾಡುತ್ತಿದ್ದ ಗುರುಮೂರ್ತಿ ಬಿ.ಕಾಂ ಮುಗಿಸಿ ಕಂಪ್ಯೂಟರ್ ಆಪರೇಟಿಂಗ್ ಮಾಡುತ್ತಿದ್ರು…
ಕೆಲಸದಲ್ಲಿ ದುಡಿಮೆ ಸರಿ ಇದ್ರು ಮನತೃಪ್ತಿ ಇರಲಿಲ್ಲ..ಆಗ ಪ್ರಾರಂಭವಾಗಿದ್ದೆ ಈ ಪೇಂಟಿಂಗ್ ಜರ್ನಿ.. ನಿರಂತರ ಹೋರಾಟಕ್ಕೆ ತಮ್ಮ ಟೈಪಿಂಗ್ ಮಿಷನ್ ಇಟ್ಟುಕೊಂಡು 24ಕ್ಕೂ ಹೆಚ್ಚು ಅಕ್ಷರ, ಚಿಹ್ನೆಗಳನ್ನು ಬಳಸಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ.. ಈ ವಿಭಿನ್ನ ಕಲೆ ಕಂಡು ಜನ್ರು ಸಖತ್ ಖುಷ್ ಆಗಿದ್ದಾರೆ…ಟೈಪ್ ಅಕ್ಷರದಲ್ಲಿ ಬಿಡಿಸಿದ 25 ಅಡಿ ಮದರ್ ತೆರೇಸಾ ಚಿತ್ರಕೆ ನವೆಂಬರ್ – 25 – 2023ರಲ್ಲಿ ಗುರುಮೂರ್ತಿ ವಿಶ್ವ ದಾಖಲೆ ಬರೆದಿದ್ದಾರೆ…

