Udupi News: ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ಅವರು ದಕ್ಷಿಣಕನ್ನಡದ ಕುವರಿ ದೇವಿಶಾ ಅವರನ್ನು ವರಿಸಿದ್ದು, ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ.
ಅದರಲ್ಲೂ ಉಡುಪಿಯಲ್ಲಿರುವ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆದು ಹೋಗುತ್ತಾರೆ. ಈ ಬಾರಿ ಅವರ ಪತ್ನಿ ದೇವಿಶಾ ಬಂದು, ಕಾಪು ದೇವಿಯ ದರ್ಶನ ಪಡೆದಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಅವರು ದೇವಿಶಾ ಅವರಿಗೆ ಪ್ರಸಾದ ವಿತರಿಸಿದರು.
ಸೂರ್ಯಕುಮಾರ್ ದಂಪತಿ ಮೇಲೆ ಇದೆ ಕಾಪು ಮಾರಿಯಮ್ಮನ ಆಶೀರ್ವಾದ
ಪ್ರಥಮ ಬಾರಿ ಅವರು ದೇವಸ್ಥಾನಕ್ಕೆ ಬಂದಾಗ, ದೇವಿಯ ಪವಾಡದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಆದರೆ ದೇವಿಶಾ ಹೇಳಿದ್ದಕ್ಕೆ, ದೇವಿಯ ಬಳಿ ಟೀಂ ಇಂಡಿಯಾ ವರ್ಲ್ಡ್ ಕಪ್‌ನಲ್ಲಿ ಗೆದ್ದರೆ, ಮತ್ತೆ ಬಂದು ಹರಕೆ ತೀರಿಸುತ್ತೇನೆ ಎಂದು ಹೇಳಿದ್ದರಂತೆ.
ಅದರಂತೆ ಮ್ಯಾಚ್ ಗೆದ್ದ ಬಳಿಕ ಸೂರ್ಯಕುಮಾರ್ ದೇವಸ್ಥಾನಕ್ಕೆ ಬಂದು ಕಾಪು ಮಾರಿಯಮ್ಮನ ದರ್ಶನ ಪಡೆದಿದ್ದರು. ಬಳಿಕ ಬಂದಾಗ, ಸ್ವತಃ ಪುರೋಹಿತರೇ ದೇವಿಯ ಬಳಿ ತಂಡದ ನಾಯಕನಾಗುವಂತೆ ಬೇಡಿಕೋ ಎಂದಿದ್ದರಂತೆ. ಆಗ ಸೂರ್ಯ ಕುಮಾರ್, ಅದೆಲ್ಲ ಹೇಗೆ ಸಾಧ್ಯ..? ಅದು ಅಸಾಧ್ಯದದ ಮಾತು ಎಂದಿದ್ದರಂತೆ.
ಆದರೆ ಪುರೋಹಿತರು ನಾನು ಹೇಳಿದ ಹಾಗೆ ಕೇಳಿಕೋ, ನಾಯಕನಾದಾಗ ಬಂದು ದೇವಿಯ ದರ್ಶನ ಮಾಡು ಎಂದಿದ್ದರಂತೆ. ಸೂರ್ಯ ಕುಮಾರ್ ಆ ರೀತಿ ಬೇಡಿ ಕೆಲ ದಿನಗಳಲ್ಲೇ ಅವರಿಗೆ ನಾಯಕನಾಗುವ ಅವಕಾಶ ಸಿಕ್ಕಿತು. ಬಳಿಕ ನೂತನ ದೇವಸ್ಥಾನಕ್ಕೆ ಬಂದು, ಕಾಣಿಕೆ ಅರ್ಪಿಸಿ, ದೇವಿಯ ದರ್ಶನ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಸೂರ್ಯಕುಮಾರ್, ಈ ಬಾರಿ ನಾನು ದೇವಿಯ ಬಳಿ ಏನೂ ಬೇಡಿಲ್ಲ. ಬದಲಾಗಿ, ದರ್ಶನ ಮಾಡಿ, ಕೈ ಮುಗಿದಿದ್ದೇನೆ ಎಂದಿದ್ದರು.
ಮಂಗಳೂರು, ಉಡುಪಿ, ಕುಂದಾಪುರ ತಾಲೂಕಿನ ಯಾವುದೇ ಜಾಹೀರಾತು ನೀಡಲು ಸಂಪರ್ಕಿಸಿ: 9743599340, ಶ್ರೀಕಾಂತ್ ಸೋಮಯಾಜಿ

