Karavali News: ಕಾರ್ಕಳ : ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಬುಧವಾರ ಜರುಗಿದ ನಂದಳಿಕೆ ಚಾವಡಿ ಅರಮನೆ ಸರಳ ಎಸ್.ಹೆಗ್ಡೆಯವರು ಬರೆದ “ಸತ್ಯಮಾಲೋಕಂದ ಸಿರಿ” ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ವಿಜಯಾ ಬ್ಯಾಂಕ್‌ನ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಿದರು.
ಸಿರಿಗಳ ಪಾಡ್ದಾನ ಕಥೆಯ ರಚನೆಗೆ ಸಹಕಾರಿಯಾಗಿದೆ. ನಂದಳಿಕೆ ಸಿರಿ ಜಾತ್ರೆಗೆ ಪ್ರಸಿದ್ಧವಾಗಿರುವ ಸ್ಥಳ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವದ ಹಾಗೂ ಇತಿಹಾಸ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎಸ್.ಆರ್ ಮಾತನಾಡಿ ಸತ್ಯಮಾಲೋಕಂದ ಸಿರಿ ಪುಸ್ತಕದಲ್ಲಿ ಶ್ರೀಮಂತ ತುಳುನಾಡ ಸಂಸ್ಕತಿಯನ್ನು ತೆರೆದಿಡಲಾಗಿದೆ. ಕುಂದಾಪುರ ದಿಂದ ಹಿಡಿದು ಉಜಿರೆ ವರೆಗಿನ ಶ್ರೀಮಂತ ತುಳುನಾಡು ಸಿರಿಗಳ ಆರಾಧನೆಯ ಕಥೆಗಳು ಯುವ ಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಇಡೀ ತುಳುನಾಡಿನಲ್ಲಿ ಸುಮಾರು ೭೫ ಕಡೆಗಳಲ್ಲಿ ಸಿರಿ ಆರಾಧನೆ ನಡೆಯುತ್ತದೆ. ಇದು ತುಳುನಾಡಿನ ಇತಿಹಾಸವಾಗಿದೆ. ಈ ಕೃತಿ ಮತ್ತೊಮ್ಮೆ ಇತಿಹಾಸ ಮತ್ತು ಸಂಸ್ಕತಿಯನ್ನು ಕಟ್ಟಿ ಕೊಟ್ಟ ಕೃತಿಯಾಗಿದೆ ಎಂದರು.
ಕವತ್ತಾರು ದೇವಾಲಯದ ಅರ್ಚಕ ವಿಷ್ಣು ರಾಜ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಚಾವಡಿ ಅರಮನೆ ಸುಂದರರಾಮ ಹೆಗ್ಡೆ, ಆಶಾ ಸುಹಾಸ್ ಹೆಗ್ಡೆ, ಡಾ. ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.
Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!
Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ