Tuesday, November 11, 2025

Latest Posts

ಉಮಾಶ್ರೀಗೆ ಕಾನೂನು ಬಿಸಿ, ಮಸ್ಕಿ ನ್ಯಾಯಾಲಯಕ್ಕೆ ಹಾಜರ್!

- Advertisement -

2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಂದರ್ಭದಲ್ಲಿ ವಿವಾದಾತ್ಮಕ ಭಾಷಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ಗುರುವಾರ ಮಸ್ಕಿಯ JMFC ನ್ಯಾಯಾಲಯಕ್ಕೆ ಹಾಜರಾದರು. ಆದರೆ ನ್ಯಾಯಾಲಯದ ಕಲಾಪಗಳನ್ನೇ ಭರಿಸುವ ಕಾರಣ, ವಿಚಾರಣೆ ಮುಂದೂಡಲಾಗಿ ಅವರು ನ್ಯಾಯಾಲಯದಿಂದ ವಾಪಾಸಾಗಿ ತೆರಳಿದ್ದರು.

ನ್ಯಾಯಾಲಯದಿಂದ ಸಮನ್ಸ್ ಬಂತುಮೇಲೆ, ಬೆಂಗಳೂರಿನಿಂದ ಉಮಾಶ್ರೀ ಮಸ್ಕಿಗೆ ಆಗಮಿಸಿದ್ದರು. ಆದರೆ ಮಸ್ಕಿ ನ್ಯಾಯಾಲಯದ ವಕೀಲರು ವಕೀಲರು, ಸುಪ್ರೀಂಕೋರ್ಟ್ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆತ ನಡೆಸಿದ ಪ್ರಕರಣ ಖಂಡನೆಗಾಗಿ ನ್ಯಾಯಾಲಯದ ಕಲಾಪ ಬಹಿಷ್ಕರಿಸುವ ಹಿನ್ನೆಲೆಯಲ್ಲಿ, ಉಮಾಶ್ರೀ ಅವರು ನ್ಯಾಯಾಲಯದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ.

ನಟಿ ಉಮಾಶ್ರೀ ತಮ್ಮ ವಕೀಲ ನಬಿ ಶೆಡಮಿಯವರ ಕಚೇರಿಗೆ ತೆರಳಿ, ಮುಂದಿನ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದಾರೆ. ಅವರು ಬೇರೆ ದಿನಾಂಕ ಪಡೆಯುವ ಸಾಧ್ಯತೆ ಇರುವುದಾಗಿ ವಕೀಲರು ತಿಳಿಸಿದ್ದಾರೆ. 2023 ರ ಚುನಾವಣಾ ಪ್ರಚಾರ ಸಮಯದಲ್ಲಿ ನಡೆದ ವಿವಾದಾತ್ಮಕ ಭಾಷಣದ ಪ್ರಕರಣವನ್ನು ಚುನಾವಣಾಧಿಕಾರಿ ದಾಖಲಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ದಿನಾಂಕ ತಿಳಿಯಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss