Sunday, April 13, 2025

Latest Posts

ಪತಿಯ ಕಾಟ ತಾಳಲಾರದೇ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮೀನಾಕ್ಷಿಯಾದ ಮೆಹನಾಜ್

- Advertisement -

National News: ಇಂದಿನ ಕಾಲದಲ್ಲಿ ಕೆಲ ಹಿಂದೂಗಳು, ತಮಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳು ಇಷ್ಟ ಅಂತಾ, ಮತಾಂತರಗೊಂಡು, ಬಳಿಕ ಆ ಮತದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಡುತ್ತ ಬಂದಿದ್ದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೇ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮೋಸ ಮಾಡಿ ಮದುವೆಯಾದ ಕೆಲ ಮುಸ್ಲಿಂ ಯುವಕರು, ಮದುವೆಯ ಬಳಿಕ ಆಕೆಯ ಬಾಳನ್ನೇ ಅಕ್ಷರಶಹ ನರಕ ಮಾಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ.

ಆದರೆ ಇಲ್ಲಿ ತಮ್ಮ ಮನೆಯಲ್ಲಿ ಪತಿ ತೀವ್ರ ಕಾಟ ಕೊಡುತ್ತಿದ್ದು, ತಮಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಮಕ್ಕಳೊಂದಿಗೆ ಮುಸ್ಲಿ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ವೀಡಿಯೋ ಕೂಡ ವೈರಲ್ ಆಗಿದೆ.

ಇದರಲ್ಲಿ ಓರ್ವ ಮಹಿಳೆಯ ತನ್ನ ಇಬ್ಬರು ಮಕ್ಕಳೊಂದಿಗೆ ಬಂದು ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇವರು ಹೇಳುವ ಪ್ರಕಾರ, ಪತಿ ಪ್ರತಿನಿತ್ಯ ಥಳಿಸುತ್ತಿದ್ದ ಮತ್ತು ಹಿಂಸೆ ನೀಡುತ್ತಿದ್ದ. ಅಲ್ಲದೇ, ಅವರ ಮನೆಯಲ್ಲಿ ಆ ಮಹಿಳೆಗೆ ಗೌರವವೇ ನೀಡುತ್ತಿರಲಿಲ್ಲ. ಆದರೆ ಹಿಂದೂ ಹೆಣ್ಣು ಮಕ್ಕಳಿಗೆ ಪುರುಷರು ಗೌರವ ನೀಡುವುದನ್ನು ಕಂಡು ಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಸೇರುತ್ತಿದ್ದೇನೆ ಎಂದು ಆ ಮಹಿಳೆ ಹೇಳಿದ್ದಾರೆ.

ಇಬ್ಬರು ಗಂಡು ಮಕ್ಕಳೊಂದಿಗೆ ಮೆಹನಾಜ್ ಎಂಬ ಮಹಿಳೆ ಹಿಂದೂ ಧರ್ಮಕ್ಕೆ ಮತಾತಂರಗೊಂಡಿದ್ದು, ಮೆಹನಾಜ್ ಮೀನಾಕ್ಷಿಯಾಗಿ ಮತ್ತು ಅವರಿಬ್ಬರೂ ಮಕ್ಕಳು ಲವ್-ಕುಶ್ ಆಗಿ ಹಿಂದೂವಾಗಿದ್ದಾರೆ. ಈ ಮೂಲಕ 15 ವರ್ಷದ ದಾಂಪತ್ಯಕ್ಕೆ ಮೀನಾಕ್ಷಿ ಎಳ್ಳು-ನೀರು ಬಿಟ್ಟಿದ್ದಾರೆ.

- Advertisement -

Latest Posts

Don't Miss