Saturday, March 2, 2024

Latest Posts

ಸೀಟ್ ಬೆಲ್ಟ್ ಹಾಕದೆ ವಿಮಾನ ಪ್ರಯಾಣ- ಬಾಯಿಗೆ ಬಂತು ಪ್ರಾಣ…!

- Advertisement -

ಯುನೈಟೆಟ್ ಸ್ಟೇಟ್ಸ್ : ಹವಾಮಾನ ವೈಪರಿತ್ಯ ಮತ್ತು ದಟ್ಟ ಮೋಡಗಳಿಂದಾಗಿ ವಿಮಾನದಲ್ಲಿ ಉಂಟಾದ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಸೀಟ್ ಬೆಲ್ಟ್ ಹಾಕದ ಪ್ರಯಾಣಿಕರ ತಲೆ ವಿಮಾನದ ಸೀಲಿಂಗ್ ಗೆ ಬಡಿದು ಗಾಯಗೊಂಡಿರುವ ಪ್ರಕರಣ ನಡೆದಿದೆ.

ಕೆನಡಾದ ವಾನ್ಕೋವೊರ್ ನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತಲುಪಬೇಕಿದ್ದ ಏರ್ ಕೆನಡಾ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ. ಹೊನೆಲುಲು ಬಳಿ ತೆರಳುತ್ತಿದ್ದಂತೆಯೇ ದಟ್ಟ ಮೋಡಗಳಿಂದ ವಿಮಾನದಲ್ಲಿ ಪ್ರಕ್ಷುಬ್ಧತೆ ( ತೀವ್ರ ಅಲುಗಾಟ) ಶುರುವಾಗಿದೆ. 36000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಾಗಾದ್ರು. ಇನ್ನು ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದ ಪ್ರಯಾಣಿಕರ ತಲೆ ವಿಮಾನದ ಸೀಲಿಂಗ್ ಬಡಿದು ತೀವ್ರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ವಿಮಾನದಲ್ಲಿದ್ದ 269 ಪ್ರಯಾಣಿಕರ ಪೈಕಿ 37 ಮಂದಿ ಪ್ರಯಾಣಿಕರು, ಗಗನ ಸಖಿಯರೂ ಸೇರಿದಂತೆ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಈ ಪೈಕಿ 9 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಪೈಲಟ್ ಹತ್ತಿರದಲ್ಲಿದ್ದ ಹುವಾಯ್ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡುವ ಅನಿವಾರ್ಯತೆ ಎದುರಾಯ್ತು.

ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಯೂಟರ್ನ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=lpaNjiFmoE4
- Advertisement -

Latest Posts

Don't Miss