Sunday, September 8, 2024

Latest Posts

Former protest: ಬಜೆಟ್ ನಲ್ಲಿ ಕೋಲಾರ ಕಡಗಣನೆ

- Advertisement -

ಕೋಲಾರ :ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ 14 ನೇ ಬಜೆಟ್ ನಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಅಭಿವೃದ್ದಿಗಾಗಿ ಅನುದಾನವನ್ನು ನೀಡಿದ್ದಾರೆ. ಆದರೆ ಗಣಿ ಜಿಲ್ಲೆ ಕೋಲಾರವನ್ನು ಕಡೆಗಣನೆ ಮಾಡಿದ್ದಾರೆಂದು ನಗರದ ಬಸ್ ನಿಲ್ದಾಣದಲ್ಲಿ ರೈತ ಸಂಘಟನೆಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ.     

ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳಾದ ಕೆಸಿ ವ್ಯಾಲಿಯ 3 ನೇ ಹಂತದ ಶುದ್ಧೀಕರಣ ಘಟಕಸ್ಥಾಪನೆ ಮಾಡಬೇಕು. ಹಾಗೆಯೇ ಇದುವರೆಗೂ ಯರಗೋಳ ಯೋಜನೆಯನ್ನು ಲೋಕಾರ್ಪಣೆ ಮಾಡಿಲ್ಲ. ಮಾರುಕಟ್ಟೆ ಅಭಿವೃದ್ದಿ ಆಧ್ಯತೆ ನೀಡಿಲ್ಲ. ಹಾಗೂ  ಜಿಲ್ಲೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ನಗರದಲ್ಲಿ ರಿಂಗ್ ರೋಡ್ ಸೇರಿದಂತೆ ಯಾವುದೇ ಅಭಿವೃದ್ದಿ ಯೋಜನೆಗಳಿಗೆ ಅನುದಾನವನ್ನು ಘೋಷಣೆ ಮಾಡಿಲ್ಲ.

ಹಾಗೂ ಇನ್ನು ಹಲವಾರು ಸಮಸ್ಯೆಗಳು ಜಿಲ್ಲೆಯಲ್ಲಿ ತಲೆಯೆತ್ತಿದ್ದು ಇವೆಲ್ಲವೂ ಜನಪ್ರತಿನಿಧಿಗಳ ಕಣ್ಣಿಗೆ ಕಾಣಿಸಲಿಲ್ಲವೆ ? ಕೋಲಾರ ಜಿಲ್ಲೆಯನ್ನು ಈ ಬಾರಿಯ ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದು ರೈತ ಸಂಘಟನೆಗಳು ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು

ತಿಮಿಂಗಲ ಮೂಳೆಗಳಿಗೆ ಪೂಜೆ ಮಾಡುವ ದೇವಾಲಯ

ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..

- Advertisement -

Latest Posts

Don't Miss