Spiritual: ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳು ನಮ್ಮ ಜೀವನವನ್ನು ಉತ್ತಮವಾಗಿಸಲು ಉಪಯುಕ್ತವಾಗಿದೆ. ಹಾಗಾಗಿ ನಾವು ಅದರ ಅರ್ಥವನ್ನು ತಿಳಿದಿರಬೇಕು. ಆಗ ಜೀವನ ಸುಲಭವಾಗುತ್ತದೆ. ಹಾಗಾದ್ರೆ ನಾವು ಭಗವದ್ಗೀತೆಯ ಯಾವ ವಿಚಾರಗಳನ್ನು ತಿಳಿದರೆ, ಜೀವನ ಚೆನ್ನಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ಕರ್ಮ ಮಾಡು ಅದರ ಫಲ ನನಗೆ ಬಿಡು: ಭಗವದ್ಗೀತೆಯಲ್ಲಿ ಕೃಷ್ಣ ಕರ್ಮಣ್ಯವಾಧಿಕಾರಸ್ಥೆ ಮಾ ಫಲೇಶು ಕದಾಚನಾ ಎಂದು ಹೇಳಿದ್ದಾರೆ. ಅಂದ್ರೆ ನೀನು ನಿನ್ನ ಕೆಲಸ ಮಾಡು, ಅದರ ಫಲತಾಂಶದ ಬಗ್ಗೆ ಚಿಂತಿಸಬೇಡ. ಅದನ್ನು ನಾನು ನೋಡಿಕ“ಳ್ಳುತ್ತೇನೆ ಎಂದರ್ಥ. ಹಾಗಾಗಿ ನಾವು ಯಾವುದಾದರೂ ಕೆಲಸ ಮಾಡಿ, ಅದರ ಫಲವನ್ನು ನಿರೀಕ್ಷಿಸದೇ ಇದ್ದರೆ, ಇದರಿಂದ ಬರುವ ಫಲ ನಮಗೆ ದುಃಖ ತರುವುದಿಲ್ಲ. ಬದಲಾಗಿ ನಮ್ಮನ್ನು ಇನ್ನೂ ಶಕ್ತಿ ಶಾಲಿಯನ್ನಾಗಿ ಮಾಡುತ್ತದೆ.
ಏಕೆಂದರೆ ಮನುಷ್ಯ ಯಾವಾಗ ಏನಾದರೂ ಕೆಲಸ ಮಾಡಿ, ಅದರ ಫಲಕ್ಕಾಗಿ ಕಾತುರದಿಂದ ಕಾಯುತ್ತಾನೋ, ಆಗಲೇ ಅವನಿಗೆ ನಿರಾಸೆಯಾಗುತ್ತದೆ. ಅವನು ಗೆಲುವಿಗಾಗಿಯೇ, ಲಾಭಕ್ಕಾಗಿಯೇ ಕಾಯುತ್ತಾನೆ. ಆದರೆ ಅವನಿಗೆ ಸೋಲು ಸಿಕ್ಕರೆ, ಅವನಿಗೆ ನಿರಾಸೆಯಾಗುತ್ತದೆ. ಅದೇ ನಿರೀಕ್ಷೆಯೇ ಇಲ್ಲದವರಿಗೆ ಸೋಲು ನೋವು ತರುವುದಿಲ್ಲ.
ಇನ್ನು ಎರಡನೇಯದಾಗಿ ನಿಮ್ಮ ಮನಸ್ಸನ್ನು ನೀವೇ ಗೆಲ್ಲಿ. ಯಾರು ತಮ್ಮ ಮನಸ್ಸಿನ ಮಾತು ಕೇಳಿ ಜೀವನ ಮಾಡುತ್ತಾರೋ, ಅವರು ಈ ಪ್ರಪಂಚದ ಅತ್ಯಂತ ಖುಷಿ ಮತ್ತು ನೆಮ್ಮದಿಯಾಗಿರುವ ಮನುಷ್ಯನಾಾಗಿರುತ್ತಾನೆ. ಯಾರಾದ್ರೂ ಏನಾದ್ರೂ ಅಂದುಕ“ಂಡರೆ ಅಂತಾ ತಿಳಿದು ಬದುಕು ಮಾಡುವವರು ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
ಬದಲಾವಣೆಗೆ ಹೆದರದಿರಿ: ನಾವು ಬದಲಾವಣೆಗೆ ಎಂದಿಗೂ ಹೆದರಬಾರದು. ಬದಲಾವಣೆಗೆ ಹೆದರಿ ಇದ್ದಲ್ಲೇ ಇದ್ದರೆ, ಪಾಚಿ ಹಿಡಿದ ನೀರಿನ ಹಾಗಾಗುತ್ತೇವೆ. ಹಾಗಾಗಿ ಇಷ್ಟವಿಲ್ಲದ ಕೆಲಸವನ್ನು ಮಾಡುವ ಬದಲು, ನಿಮಗಿಷ್ಟವಾದ ಕೆಲಸ ಮಾಡಿ. ಕೆಲವು ಸಮಯ ಕೆಲಸ ಕಷ್ಟ ಎನ್ನಿಸಿದರೂ, ಬಳಿಕ ಆ ಕೆಲಸವೂ ನಿಮಗೆ ಸುಲಭವಾಗುತ್ತದೆ.
ನಿರ್ಭಯವಾಗಿ ಪ್ರತಿಕ್ರಿಯಿಸಿ: ಯಾವ ಮನುಷ್ಯ ಯಾವುದಕ್ಕೂ ಹೆದರದೇ, ಬಂದಿದ್ದು ಬರಲಿ ಎದುರಿಸುತ್ತೇನೆ ಎನ್ನುತ್ತಾನೋ, ಅಂಥವರು ಜೀವನದಲ್ಲಿ ನೆಮ್ಮದಿಯಾಗಿ, ಚೆನ್ನಾಗಿರುತ್ತಾರೆ. ಹಾಗಾಗಿಯೇ ಧೈರ್ಯಂ ಸರ್ವತ್ರ ಸಾಧನಂ ಅಂತಾ ಹೇಳೋದು. ಯಾರ ಧೈರ್ಯ ಮಾಡಿ ಮುಂದುವರಿಯುತ್ತಾರೋ, ಅಂಥವರೇ ಜೀವನದಲ್ಲಿ ಉದ್ಧಾರವಾಗೋದು.
ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡಿ. ನಾವು ಯಾವುದೇ ಕೆಲಸ ಮಾಡಿದರೂ, ಅದರ ಹಿಂದೆ ಉತ್ತಮ ಉದ್ದೇಶವಿರಬೇಕು. ಆಗಲೇ ಆ ಕೆಲಸಕ್ಕೆ ಬೆಲೆ ಸಿಗೋದು. ಮತ್ತು ನಮ್ಮ ಜೀವನದಲ್ಲಿ ನಾವು ಯಶಸ್ಸು ಕಾಣೋದು.