ಸಂಕ್ರಾಂತಿಗೆ ಮೊಮ್ಮಕ್ಕಳಿಗೆ ಕರಿ ಎರೆದು ಸಂಭ್ರಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಸಂಕ್ರಾಂತಿ ವೇಳೆ ಕರಿ ಎರೆಯುವ ಪದ್ಧತಿ ಹಲವೆಡೆ ಇದೆ. ಚಿಕ್ಕ ಚಿಕ್ಕ ಮಕ್ಕಳಿಗೆ ದೃಷ್ಟಿ ತಾಕದೇ ಇರಲಿ ಎಂದು ಈ ಪದ್ಧತಿ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮನೆಯಲ್ಲೂ ಈ ಪದ್ಧತಿ ಅನುಸರಿಸಿದ್ದು, ಪ್ರಹ್ಲಾದ್ ಜೋಶಿ ಅವರು ತಮ್ಮ ಮನೆ ಮಕ್ಕಳಿಗೆ ಕರಿ ಎರೆದು ಸಂಭ್ರಮಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂಭ್ರಮ ಹಂಚಿಕ“ಂಡಿರುವ ಜೋಶಿ, “ಬಾರವ್ವ ಚಿನ್ನಕ್ಕ ಬಾರವ್ವ ಮಲ್ಲಕ್ಕ.. ಮಗುವಿಗೆ ಕರಿ ಎರೆಯೋಣ ಬರ್ರಿಕ್ಕ.. ಸಕ್ಕರೆ ಅಚ್ಚು ಸವಿ ಬೆಲ್ಲ ತರ್ರಿಕ್ಕ.. ಕಂದನ ಹಣೆಗೆ ತಿಲಕವ ಇಡ್ರಿಕ್ಕ.. ನೂರು ಕಾಲ ಸುಖವಾಗಿ ಬಾಳಲಿ ಈ ಕಂದ.. ಕುಲಕ್ಕೆ ಕೀರ್ತಿಯ ತರಲಿ ನಮ್ಮ ಈ ನಂದ..” ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಂದು.. ನನ್ನ ಮೊಮ್ಮಕ್ಕಳಿಗೆ ಕರಿ ಎರೆಯುವ ಸಂಭ್ರಮ ಎಂದು ಹೇಳಿದ್ದಾರೆ.

ಕರಿ ಎರೆಯುವುದು ಎಂದರೆ, ಮಕ್ಕಳಿಗೆ ಅಲಂಕಾರ ಮಾಡಿ, ಮಣೆಯ ಮೇಲೆ ಕೂರಿಸಿ, ಅವರ ಮುಂದೆ ಕಬ್ಬು, ಹಣ, ಹಣ್ಣು, ಎಳ್ಳು-ಬೆಲ್ಲ ಹೀಗೆ ಕೆಲವು ವಸ್ತುಗಳನ್ನು ಇರಿಸಿಬೇಕು. ಬಳಿಕ ಸೇರಿನಲ್ಲಿ ಇವೆಲ್ಲವನ್ನೂ ಹಾಕಿ, ಮಕ್ಕಳ ತಲೆಯ ಮೇಲೆ ಎರೆಯಬೇಕು. ಮುಂಚೆ ಎಲ್ಲ ಅಕ್ಕಪಕ್ಕದ ಮಕ್ಕಳನ್ನು ಕರೆದು ಈ ಶಾಸ್ತ್ರ ಮಾಡುತ್ತಿದ್ದರು. ಆಗ ಬಂದ ಮಕ್ಕಳು, ಎರೆದ ಕರಿಯಲ್ಲಿ ತಮಗೆನು ಬೇಕೋ, ಅದನ್ನೆಲ್ಲ ತೆಗೆದುಕ“ಂಡು ಹೋಗುತ್ತಿದ್ದರು. ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿ ಈ ಕರಿ ಎರೆಯಲಾಗುತ್ತದೆ.

About The Author