UP Election 2022 ಗೋರಖ್‌ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿ ಎಂ ಯೋಗಿ ಆದಿತ್ಯನಾಥ್ :

 ಪಂಚರಾಜ್ಯಗಳ ಚುನಾವಣೆ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ನಡೆಯಲಿದೆ. ಫೆಭ್ರವರಿ 10 ರಿಂದ ಪ್ರಾರಂಭವಾಗಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ.
     ಎಲ್ಲರಿಗೂ ಈ ಬಾರಿ ಸಿ ಎಂ ಯೋಗಿ ಆದಿತ್ಯನಾತ್ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲದ ವಿಚಾರವಾಗಿತ್ತು. ಈ ಬಾರಿ ಯೋಗಿ ಆದಿತ್ಯನಾತ್ ಅಯೋಧ್ಯೆಯಿಂದ ಸ್ಪರ್ಧಿಸುತ್ತಾರೆ ಎಂದು ಮಾಹಿತಿ ಹರಡಿತ್ತು. ಇನ್ನು ಸ್ಪಷ್ಟವಾಗಿರಲಿಲ್ಲ ಆದರೆ ಕುತೂಹಲಕ್ಕೀಗ ತೆರೆಬಿದ್ದಿದೆ. ಸಿ ಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸುವುದಿಲ್ಲ. ಬದಲಿಗೆ ಅವರು ಗೋರಖ್‌ಪುರ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂಬುದು ಪಕ್ಕಾ ಆಗಿದೆ. 

About The Author