ಉತ್ತರಪ್ರದೇಶದಲ್ಲಿ ಲವ್ ಜಿಹಾದ್‌ಗೆ ಕಡಿವಾಣ ಹಾಕಲಾಗಿದೆ. ಕಾನೂನು ಬಾಹಿರವಾಗಿ ಮತಾಂತರ ನಿಷೇಧಿಸಿದ್ದು, ಯೋಗಿ ಸರ್ಕಾರ ಸುಗ್ರಿವಾಜ್ಞೆಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ ಸುಗ್ರೀವಾಜ್ಞೆ ಉಲ್ಲಂಘಿಸಿದವರಿಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ.

ಮೋಸ ಮತ್ತು ದೌರ್ಜನ್ಯದಿಂದ ಮತಾಂತರ ಮಾಡಿದರೆ ಅದನ್ನು ಜಾಮೀನು ರಹಿತ ಅಪರಾಧವೆಂದು ತೀರ್ಮಾನಿಸಿ, 10 ವರ್ಷ ಶಿಕ್ಷೆ ನೀಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಮಂದಿಯನ್ನ ಮೋಸದಿಂದ ಮತಾಂತರ ಮಾಡಲಾಗಿದ್ದು, ಇದು ಅನಿವಾರ್ಯವಾಗಿತ್ತು. ಬಡ, ಶೋಷಿತ ಮಹಿಳೆಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಉತ್ತರ ಪ್ರದೇಶ ಸರ್ಕಾರ ಬಂದಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರನ್ನ ಇಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಎಂದು ಹೆಸರಿಡಲು ನಿರ್ಧರಿಸಲಾಗಿದ್ದು, ಯುಪಿ ಸರ್ಕಾರ ಅಂಗೀಕರಿಸಿದೆ.
ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ಇದಕ್ಕೆ ವಿಧಾನಸಭೆಯ ಅನುಮೋದನೆ ಸಿಕ್ಕ ಬಳಿಕ, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.