ಟೀಂ ಇಂಡಿಯಾ 17 ವರ್ಷಗಳ ಬಳಿಕ ಮತ್ತೊಮ್ಮೆ ಟಿ-20 ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಆದರೆ ಇದೀಗ ಟೀಂ ಇಂಡಿಯಾಗೆ ಹೊಸ ಸವಾಲುಗಳು ಎದುರಾಗುತ್ತಿದೆ. ವಿಶ್ವಕಪ್ ಗೆಲುವಿನ ಬಳಿಕ ಎರಡು ಪ್ರಮುಖ ಟೂರ್ನಿಗಳು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿವೆ. ಇನ್ನು ಒಂದೇ ವರ್ಷದ ಅವಧಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಗಳು ಭಾರತದ ಮುಂದಿನ ಟಾರ್ಗೆಟ್ ಆಗಿವೆ.
ಚಾಂಪಿಯನ್ಸ್ ಟ್ರೋಫಿ-2025: ಮಿನಿ ವಿಶ್ವಕಪ್ ಎಂದೇ ಗುರುತಿಸಿಕೊಳ್ಳುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಾತ್ಕಾಲಿಕವಾದ ದಿನಾಂಕವನ್ನು ಐಸಿಸಿ ನಿಗದಿ ಮಾಡಿದೆ. ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಮಾದರಿಯಲ್ಲಿ ಈ ಟೂರ್ನಿ ನಡೆಯಲಿದೆ. ಆದರೆ, ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಇಲ್ಲವಾ ಎಂಬುದೇ ಪ್ರಶ್ನೆಯಾಗಿದೆ. ಏಕೆಂದರೆ, ಈ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸುತ್ತಿದೆ. ಪಂದ್ಯಾವಳಿಗಾಗಿ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿ ಸ್ಟೇಡಿಯಂಗಳನ್ನು ಪಾಕಿಸ್ತಾನ ಬೋರ್ಡ್ ಹೆಸರಿಸಿದೆ. ಆದರೆ 2006ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ ಇದೀಗ ಭಾರತ ತಂಡ ಪಾಕ್ಗೆ ತೆರೆಳುವ ಬಗ್ಗೆ ಅನುಮಾನಗಳಿವೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು 2025ರ ಜೂನ್ ತಿಂಗಳಿನಲ್ಲಿ ನಡೆಯಲಿದೆ. ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು. ಯಾಕೆಂದರೆ, ಭಾರತ ತಂಡವು WTC ಅಂಕ ಪಟ್ಟಿಯಲ್ಲಿ 68.51 ರಷ್ಟು ಗೆಲುವಿನ ಪರ್ಸೆಂಟೇಜ್ ನೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಬಾರಿ ಒಟ್ಟೂ 9 ಪಂದ್ಯಗಳನ್ನಾಡಿದ ಭಾರತ 6ರಲ್ಲಿ ಜಯಗಳಿಸಿ 2ಪಂದ್ಯಗಳನ್ನು ಸೋತು 1ಪಂದ್ಯ ಡ್ರಾ ಮಾಡಿಕೊಂಡಿದೆ. ಫೈನಲ್ ರೇಸ್ನಲ್ಲಿರುವ ಇತರೆ ತಂಡಗಳನ್ನು ನೋಡೋದಾದ್ರೆ, ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ, ತೃತೀಯ ಸ್ಥಾನದಲ್ಲಿ ನ್ಯೂಝಿಲೆಂಡ್ ಹಾಗೂ 4ನೇ ಸ್ಥಾನದಲ್ಲಿ ಶ್ರೀಲಂಕಾ ತಂಡವಿದೆ.
ಹೀಗಾಗಿ ಈ ಮುಂದಿನ ದೊಡ್ಡ ಟೂರ್ನಿಗಳಲ್ಲಿ ಮತ್ತೆ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಆಶಯ.
Team India: ವಿಶ್ವ ಗೆದ್ದ ಟೀಂ ಇಂಡಿಯಾ ಮುಂದಿದೆ ಸವಾಲು!
- Advertisement -
- Advertisement -