www.karnatakatv.net : ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಲಾಯಿತು. ಕೊರೊನಾ ಪರಿಸ್ಥಿತಿಯಿಂದಾಗಿ 2020 ರಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅನೇಕ ನಾಗರಿಕ ಸೇವೆಗಳ ಆಕಾಂಕ್ಷಿಗಳು ಹೆಚ್ಚುವರಿ ಪ್ರಯತ್ನಕ್ಕೆ ಒತ್ತಾಯಿಸುತ್ತಿರುವ ನಡುವೆ ಈ ಸ್ಪಷ್ಟನೆಯನ್ನು ನೀಡಲಾಗಿದೆ.


2020ರ ನಾಗರಿಕ ಸೇವಾ ಪರೀಕ್ಷೆಯ ಎಲ್ಲ ಆಕಾಂಕ್ಷಿಗಳಿಗೆ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಎಲ್ಲರಿಗೂ ಮತ್ತೊಂದು ಅವಕಾಶವನ್ನು ಒದಗಿಸಲು ಸರ್ಕಾರ ಚಿಂತಿಸುತ್ತಿದೆಯೇ? ರಾಜ್ಯ ಸಭಾ ಸದ್ಯಸರು ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತಿರುವ ಸಚಿವ ಜಿತೇಂದ್ರ ಸಿಂಗ್ ಅವರು ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಅಂತ ಹೇಳಿದ್ದಾರೆ. ಫೆಬ್ರುವರಿಯಲ್ಲಿ, ಅಕ್ಟೋಬರ್ ಪರೀಕ್ಷೆಗಳಲ್ಲಿ ಹಾಜರಾಗಲು ವಿಫಲವಾದ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷಾ ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯತ್ನವನ್ನು ನೀಡಲು ಕೇಂದ್ರವು ಒಪ್ಪಿಕೊಂಡಿತ್ತು.