Saturday, October 5, 2024

Latest Posts

ಸೇತುವೆ ಮೇಲಿಂದ ಮೂತ್ರ ವಿಸರ್ಜನೆ- ತಪ್ಪಿಸಿಕೊಳ್ಳಲು ದೋಣಿಯಿಂದ ನೀರಿಗೆ ಜಿಗಿದ 4 ಪ್ರವಾಸಿಗರು..!

- Advertisement -

ಜರ್ಮನಿ: ಸೇತುವೆ ಮೇಲಿನಿಂದ ವ್ಯಕ್ತಿ ವಿಸರ್ಜಿಸುತ್ತಿದ್ದ ಮೂತ್ರ ತಮಗೆ ಸಿಡಿಯುತ್ತದೆಂದು ತಿಳಿದು ದೋಣಿಯಲ್ಲಿದ್ದ ಪ್ರಯಾಣಿಕರು ನೀರಿಗೆ ಜಿಗಿದು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಬರ್ಲಿನ್ ನ ಜನ್ನೋವಿಟ್ಜ್ ಸೇತುವೆ ಬಳಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಇನ್ನೇನು ಬ್ರಿಡ್ಜ್ ದಾಟಿ ಮುಂದೆ ಸಾಗಬೇಕೆನ್ನುವಷ್ಟರಲ್ಲಿ ಸೇತುವೆ ಮೇಲಿನಿಂದ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸೋದನ್ನು ಪ್ರಯಾಣಿಕರ ಕಣ್ಣಿಗೆ ಬಿದ್ದಿದೆ. ಹೇಗಾದರೂ ಮೂತ್ರ ಸಿಡಿಯೋದನ್ನು ತಪ್ಪಿಸಿಕೊಳ್ಳಬೇಕೆಂದು ಪ್ರಯತ್ನಿಸಿದ ಪ್ರವಾಸಿಗರು ಏಕಾಏಕಿ ನೀರಿಗೆ ಜಿಗಿದಿದ್ದಾರೆ. ಆದ್ರೆ ಅವರು ಜಿಗಿಯೋ ವೇಳೆ, ಸೇತುವೆಯ ಮೇಲ್ಫಾವಣಿ ಬಳಿ ದೋಣಿ ಸಾಗಿಬಿಟ್ಟಿತು. ಈ ಜನ್ನೋವಿಟ್ಜ್ ಸೇತುವೆಯ ಮೇಲ್ಛಾವಣಿ ನೀರಿನ ಮಟ್ಟದಿಂದ ಕೇವಲ ಕೆಲವೇ ಮೀಟರ್ ನಷ್ಟು ಅಂತರದಲ್ಲಿದೆ. ಹೀಗಾಗಿ ಪ್ರವಾಸಿಗರು ನೀರಿಗೆ ಜಿಗಿಯುವಾಗ ಮೇಲ್ಛಾವಣಿ ತಲೆಗೆ ಬಡಿದು ನಾಲ್ವರು ಪ್ರಯಾಣಿಕರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ವಿದೇಶಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡೋದು ಅಪರಾಧ. ಹೀಗಾಗಿ ಮೂತ್ರ ವಿಸರ್ಜಿಸೋ ಮೂಲಕ ಘಟನೆಗೆ ಕಾರಣವಾದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ.

ಈ ವಾಹನಗಳು ಇನ್ಮೇಲೆ ಇರೋದಿಲ್ವಂತೆ..!!ಯಾಕೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=svqDRVetbSg

- Advertisement -

Latest Posts

Don't Miss