Health tips:
ಬ್ರೌನ್ ರೈಸ್ ಎಂದರೇನು..?
ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಿಳಿ ಅಕ್ಕಿಗಿಂತ ಇದನ್ನು ಸೇವಿಸುವುದು ಉತ್ತಮ.
ಕೆಂಪು ಅಕ್ಕಿಯ ವಿಧಗಳು:
ಥಾಯ್ ರೆಡ್ ಕಾರ್ಗೋ ರೈಸ್: ಇದು ಗ್ಲುಟಿನಸ್ ಅಲ್ಲದ ಉದ್ದ ಧಾನ್ಯದ ಅಕ್ಕಿ ವಿಧವಾಗಿದೆ
ಭೂತಾನ್ ಕೆಂಪು ಅಕ್ಕಿ: ಇದು ಪೂರ್ವ ಹಿಮಾಲಯದ ಭೂತಾನ್ ಸಾಮ್ರಾಜ್ಯದೊಳಗೆ ಬೆಳೆಯುವ ಮಧ್ಯಮ-ಧಾನ್ಯದ ಅಕ್ಕಿ.
ಕ್ಯಾಮಾರ್ಗು ಕೆಂಪು ಅಕ್ಕಿ: ಇದು ದಕ್ಷಿಣ ಫ್ರಾನ್ಸ್‍ನ ಕ್ಯಾಮಾರ್ಗ್ ಪ್ರದೇಶದ ಗದ್ದೆಗಳಲ್ಲಿ ಬೆಳೆಯುವ ತುಲನಾತ್ಮಕವಾಗಿ ಹೊಸ ಬಗೆಯ ಭತ್ತವಾಗಿದೆ.
ಕೇರಳದ ಮ್ಯಾಟ್ಟಾ ಅಕ್ಕಿ: ರೋಸ್‍ಮಟ್ಟಾ ಅಕ್ಕಿ, ಪಾಲಕ್ಕದನ್ ಮಟ್ಟಾ ಅಕ್ಕಿ, ಇದು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೆಳೆಯುವ ಸ್ಥಳೀಯ ವಿಧದ ಭತ್ತವಾಗಿದೆ. ಇದು ಕೇರಳ ಮತ್ತು ಶ್ರೀಲಂಕಾದಲ್ಲಿ ಚಿರಪರಿಚಿತವಾಗಿದೆ, ಅಲ್ಲಿ ಇದನ್ನು ನಿಯಮಿತವಾಗಿ ಸರಳ ಅಕ್ಕಿಗಾಗಿ ಬಳಸಲಾಗುತ್ತದೆ.
ಈ ಅಕ್ಕಿಯು ಕಂದು ಬಣ್ಣದ ಅಕ್ಕಿಯಾಗಿರುವುದು ವಿಶೇಷವಾಗಿದೆ. ಇದಕ್ಕೆ ಕಾರಣ ಅದನ್ನು ಸಂಸ್ಕರಿಸುವ ಪ್ರಕ್ರಿಯೆ ,ನಾವು ಪ್ರತಿ ದಿನ ಬಳಸುವ ಅಕ್ಕಿ ನೋಡಲು ಬೆಳ್ಳಗಿರುತ್ತದೆ, ಅದರ ಮೇಲಿನ ಹೊಟ್ಟು ಮತ್ತು ಜೀವಾಣುವನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಆದರೆ ಕೆಂಪಕ್ಕಿಯ ಸಂಸ್ಕರಣೆಯಲ್ಲಿ ಕೇವಲ ಅದರ ಮೇಲಿನ ಒಟ್ಟು ಮಾತ್ರ ತೆಗೆಯಲಾಗುತ್ತದೆ. ಕೆಂಪಕ್ಕಿಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಜೀವಾಣುಗಳು ಮತ್ತು ನಾರಿನ ಅಂಶ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಸಹಕಾರಿಯಾದ ಪ್ರಯೋಜನಗಳನ್ನು ತಂದುಕೊಡುತ್ತದೆ.
ಕೆಂಪುಅಕ್ಕಿಯ ಪ್ರಯೋಜನಗಳು :
ಇದು ವಿಟಮಿನ್ ಬಿ6 ಅನ್ನು ಹೊಂದಿರುತ್ತದೆ ,ಕೆಂಪು ಅಕ್ಕಿಯನ್ನು ನಮ್ಮ ಅಂಗದ ಕಾರ್ಯನಿರ್ವಹಣೆಗೆ ಅಗತ್ಯವಾದ ಶೇಕಡಾ 23ರಷ್ಟು ವಿಟಮಿನ್ ಬಿ6 ಅನ್ನು ಪೂರೈಸಬಹುದು. ಸಿರೊಟೋನಿನ್, ಕೆಂಪು ರಕ್ತ ಕಣಗಳ ಬೆಳವಣಿಗೆಯನ್ನು ಸಮತೋಲನಗೊಳಿಸಲು ಡಿಎನ್‍ಎ ಕೋಶಗಳ ಸೃಷ್ಟಿಗೆ ಸಹಾಯ ಮಾಡಲು ಇದು ಪ್ರಯೋಜನ ಕಾರಿಯಾಗಿದೆ .
ಪ್ರಸವಾನಂತರದ ಬಾಣಂತಿಯರ ಆರೋಗ್ಯ ಸುಧಾರಿಸಲು ಬ್ರೌನ್ ರೈಸ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಈ ಅಕ್ಕಿಯ ಸೇವನೆಯು ಬಾಣಂತಿಯರಲ್ಲಿ ಖಿನ್ನತೆ ಮತ್ತು ಆಯಾಸದ ಹಂತಗಳನ್ನು ಸುಧಾರಿಸಲು ಸಹಾಯಕವಾಗಿದೆ. ಪ್ರಸವಾನಂತರದಲ್ಲಿ ಬಾಣಂತಿಯರಿಗೆ ಕಟ್ಟು ನಿಟ್ಟಿನ ಆಹಾರ ನೀಡಲಾಗುತ್ತದೆ. ಈ ವೇಳೆ ಪೋಷಕಾಂಶಗಳ ಕೊರೆತೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬ್ರೌನ್ ರೈಸ್ ಸೇವಿಸುವುದು ಬಾಣಂತಿಯರ ಆರೋಗ್ಯ ಸುಧಾರಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ :
ಇದು ಕಡಿಮೆ ಮಟ್ಟದ ಕೊಲೆಸ್ಟ್ರಾಲ್ ಅನ್ನು ಒಳಗೊಂಡಿರುವ ಕಾರಣ ಅನೇಕ ಜನರಿಗೆ ಇದು ಆದ್ಯತೆಯ ಆಯ್ಕೆಯಾಗಿದೆ. ಕೆಂಪಕ್ಕಿಯಲ್ಲಿರುವ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಕೆಂಪಕ್ಕಿಯಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಸರ್ಜನೆಗೆ ಸಹಾಯ ಮಾಡುತ್ತದೆ.
ಕೆಂಪಕ್ಕಿಯಲ್ಲಿ ಸೆಲೆನಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ನಂತಹ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕ ಖನಿಜಾಂಶಗಳು ಕಂಡು ಬರುತ್ತವೆ. ಕೆಂಪಕ್ಕಿಯಲ್ಲಿ ನಾರಿನ ಅಂಶ ಮತ್ತು ಫೋಲೇಟ್ ಅಂಶ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಉಂಟಾಗುತ್ತದೆ. ಕೆಂಪಕ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಇರುವ ಕಾರಣ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಆಹಾರ ಪದಾರ್ಥ.
ಇದು ದೇಹದ ತೂಕವನ್ನು ಆರೋಗ್ಯಕ್ಕೆ ಅಡ್ಡ ಪರಿಣಾಮ ಬೀರದಂತೆ ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದರಲ್ಲಿರುವ ನಾರಿನಂಶ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಕೆಂಪಕ್ಕಿಯಲ್ಲಿ ಕಂಡು ಬರುವ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶ ದೀರ್ಘ ಕಾಲದವರೆಗೆ ದೇಹದ ತೂಕ ನಿಯಂತ್ರಣ ಮಾಡುವಲ್ಲಿ ಪ್ರಭಾವ ಬೀರುತ್ತದೆ.
ಸಾಮಾನ್ಯವಾಗಿ ಹೆಚ್ಚಾಗಿ ಅನ್ನ ತಿಂದರೆ ಬಹಳ ಬೇಗನೆ ಮಧುಮೇಹ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ಹೇಳುತ್ತಾರೆ. ಆದರೆ ಕೆಂಪಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ತುಂಬಾ ಕಡಿಮೆ ಇದ್ದುದರಿಂದ, ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಬಿಳಿ ಅನ್ನಕ್ಕೆ ಹೋಲಿಸಿದರೆ ಕೆಂಪಕ್ಕಿ ಅನ್ನದ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ, ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಕೂಡ ತುಂಬಾ ನಿಧಾನವಾಗಿ ದೇಹದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.
ಕೆಂಪಕ್ಕಿಯಲ್ಲಿ ಮ್ಯಾಗ್ನೇಶಿಯಂ ಹೆಚ್ಚಾಗಿರುವುದರಿಂದ, ಇದು ನಿಮ್ಮ ಉಸಿರಾಟದ ಸಮಸ್ಯೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಕೆಂಪು ಅಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ತಮಾದ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಆರೋಗ್ಯಕರ ಮೂಳೆಗಳನ್ನು ನಿರ್ಮಿಸಲು ಅಗತ್ಯವಾದ ನಿರ್ಣಾಯಕ ಪೋಷಕಾಂಶವಾಗಿದೆ ಮತ್ತು ಮೆಗ್ನೀಸಿಯಮ್ ಕೊರತೆಯು ಆಸ್ಟಿಯೊಪೊರೋಸಿಸ್ ಮತ್ತು ನಂತರದ ಜೀವನದಲ್ಲಿ ಕಡಿಮೆ ಮೂಳೆ ಸಾಂದ್ರತೆಗೆ ಕಾರಣವಾಗಬಹುದು. ಕೆಂಪು ಅಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಜಂಟಿ ಸಮಸ್ಯೆಗಳನ್ನು ತಪ್ಪಿಸಲು ಮತ್ತು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಪರಿಶೀಲಿಸಲಾಗಿದೆ.
ನಿಮ್ಮ ದೈನಂದಿನ ನಾರಿನ ಅವಶ್ಯಕತೆಗಳನ್ನು ಪೂರೈಸಲು ಕೆಂಪು ಅಕ್ಕಿ ನಿಜವಾಗಿಯೂ ಒಳ್ಳೆಯದು. ಕಾಲು ಕಪ್ ಕೆಂಪು ಅಕ್ಕಿ ಸುಮಾರು 2 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ, ಮತ್ತು ಇದು ನಿಮ್ಮ ದೈನಂದಿನ ಫೈಬರ್ ಅವಶ್ಯಕತೆಗಳಲ್ಲಿ 8ಪ್ರತಿಶತದಷ್ಟಿದೆ. ವಯಸ್ಕರಿಗೆ, ಶಿಫಾರಸು ಮಾಡಲಾದ ಫೈಬರ್ ಸೇವನೆಯು 1,000 ಕ್ಯಾಲೊರಿಗಳಿಗೆ 14 ಗ್ರಾಂ.