Friday, December 5, 2025

Latest Posts

ಹನುಮಾನ್ ಚಾಲೀಸಾ ಪಠಿಸುವುದರಿಂದ ಏನು ಪ್ರಯೋಜನ..?

- Advertisement -

ರಾಮನಾಮ ಜಪದ ಬಗ್ಗೆ,ರಾಮಕೋಟಿ ಬರೆದರೆ ಏನಾಗತ್ತೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇದೀಗ ಹನುಮಾನ್ ಚಾಲೀಸಾವನ್ನ ಪ್ರತಿದಿನ ಪಠಿಸುವುರಿಂದ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಿಮಗೆ ಯಾರಾದರೂ ಮಾಟ ಮಂತ್ರ ಪ್ರಯೋಗಿಸಿದ್ದಾರೆ. ಆದ್ದರಿಂದ ನನ್ನ ಜೀವನದಲ್ಲಿ ಏರುಪೇರಾಗುತ್ತಿದೆ. ಕೆಟ್ಟ ಕೆಟ್ಟ ಕನಸ್ಸುಗಳು ಬೀಳುತ್ತಿದೆ. ಇತ್ಯಾದಿ ಇತ್ಯಾದಿ ಸಮಸ್ಯೆಗಳಾಗುತ್ತಿದೆ ಅಂತಾ ಅನ್ನಿಸಿದ್ದಲ್ಲಿ, ಹನುಮಂತನ್ನನು ಪೂಜಿಸಿ. ಹನುಮಾನ್ ಚಾಲೀಸಾ ಪಠಿಸಲು ಶುರುಮಾಡಿ. ಹನುಮಾನ್ ಚಾಲೀಸಾವನ್ನ ಪಠಿಸುವುದರಿಂದ ಯಾವ ದುಷ್ಟಶಕ್ತಿಯೂ ನಿಮ್ಮ ಬಳಿ ಸುಳಿಯುವುದಿಲ್ಲ.

ಶತ್ರುಬಾಧೆ, ಜೀವಭಯ ಇದ್ದರೆ ಹನುಮಾನ್ ಚಾಲೀಸಾ ಪಠಿಸಿ. ಇದರಿಂದ ನಿಮಗೆ ಧೈರ್ಯ ಹೆಚ್ಚಾಗುತ್ತದೆ. ಧೈರ್ಯ ಹೆಚ್ಚಾದಾಗ, ಮನುಷ್ಯ ಯಾವುದಕ್ಕೂ ಹೆದರದೇ, ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾನೆ.
ನೀವು ಯಾವುದಾದರೂ ಊರಿಗೆ ಹೋಗುವ ಮುನ್ನ, ಹನುಮಾನ್ ಚಾಲೀಸಾ ಪಠಿಸಿ, ನಂತರ ಹೊರಡಿ. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಯಾವುದೇ ಅಡೆ ತಡೆಗಳಿರುವುದಿಲ್ಲ. ನೆಮ್ಮದಿಯಾಗಿ ನೀವು ಪ್ರಯಾಣಿಸಲು ಇದು ಅನುಕೂಲವಾಗುತ್ತದೆ.

ಸಾಡೇಸಾಥಿ, ಅಷ್ಟಮ ಶನಿ, ಪಂಚಮ ಶನಿ ಕಾಟ ಇದ್ದವರು, ಪ್ರತಿದಿನ ಹನುಮಾನ್ ಚಾಲೀಸಾ ಓದಬೇಕು. ಹನುಮಂತನನ್ನು ಆರಾಧಿಸುವವರಿಗೆ ಶನಿ ಹೆಚ್ಚು ಕಷ್ಟ ಕೊಡುವುದಿಲ್ಲ ಎಂಬ ನಂಬಿಕೆ ಇದೆ.

ಕೊನೆಯದಾಗಿ ನಮಗೆ ಗೊತ್ತಿಲ್ಲದೇ, ನಾವೇನಾದರೂ ಪಾಪ ಮಾಡಿದ್ದರೆ, ಹನುಮಾನ್ ಚಾಲೀಸಾವನ್ನ ಭಕ್ತಿಪೂರ್ವಕವಾಗಿ ಪಠಿಸುವುದರಿಂದ ಸಕಲ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಇದೆ.

- Advertisement -

Latest Posts

Don't Miss