political news
ಯಸ್ ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಹೊಸ್ತಲಲ್ಲೆ ಇದ್ದು ಪ್ರತಿಯೊಂದು ಕ್ಷೇತ್ರದಲ್ಲೋ ಎಲ್ಲಾ ಪಕ್ಷಗಳು ಭರ್ಜರಿಯಾಗಿಯೇ ಪ್ರಚಾರ ಕೈಗೊಂಡಿವೆ. ಮೂರು ಪಕ್ಷಗಳ ಪ್ರಚಾರ ಒಂದು ಕಡೆಯಾದರೆ ಇನ್ನೊಂದು ಪಕ್ಷ ಅಂದರೆ ನಟ ಉಪೇಂದ್ರ ಮುಂದಾಳತ್ವದ ಉತ್ತಮ ಪ್ರಜಾಕೀಯ ಪಕ್ಷ ಈಗ ತನ್ನ ಪಕ್ಷದ ಚಿಹ್ನೆಯನ್ನು ಘೋಷಿಸುವ ಮೂಲಕ ಪ್ರಚಾರಕ್ಕೆ ಹೊರಡಲು ಸಿದ್ದವಾಗಿದೆ.
ಈಗಾಗಲೆ ನಟ ಉಪೇಂದ್ರರವರು ರಾಜಕಾರಣಕ್ಕೆ ಎಂಟ್ರಿ ಕೊಟ್ಟು ತುಂಬಾ ವರ್ಷಗಳೆ ಕಳೆದಿವೆ. ಆದರೆ ಇಲ್ಲಿಯವರೆಗೂ ರಾಜ್ಯದ್ಯಂತ ಪ್ರವಾಸ ಮಾಡಿ ಜನರಿಗೆ ತಮ್ಮ ಪಕ್ಷದ ಕುರಿತು ಮಾಹಿತಿ ನೀಡುತ್ತಾ ಜನರಿಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದರು. ಆದರೆ ಇಲ್ಲಿಯವರೆಗೂ ಅವರು ಪಕ್ಷ ಯಾವುದು ಮತ್ತು ಪಕ್ಷದ ಚಿಹ್ನೆಯ ಬಗ್ಗೆ ಯಾವುದೇ ರೀತಿಯಾಗಿ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ .
ಆದರೆ ಈಗ ಅವರ ಪಕ್ಷದ ಪರ ಪ್ರಚಾರ ಮಾಡುವ ಅಭ್ಯರ್ಥಿಗಳಿಗೆ ಅಧಿಕೃತವಾಗಿ ಕೇಂದ್ರ ಚುನಾವಣಾ ಆಯೋಗದಿಂದ ಆಟೋರಿಕ್ಷಾ ಚಿತ್ರ ಇರುವ ಚಿಹ್ನೆಯನ್ನು ಉಪೇಂದ್ರರವರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಾಮಾಸ್ಯ ಚಿಹ್ನೆಯಾಗಿ ನೀಡಿದ . ಇನ್ನು ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಪರ ಚುನಾವಣೆಯಲ್ಲಿ ನಿಲ್ಲವ ಆಕಾಂಕ್ಷಿಗಳಿಗೆ ಆಟೋ ರಿಕ್ಷಾ ಚಿಹ್ನೆಯಿಂದ ಪ್ರಚಾರ ಮಾಡಬಹುದಾಗಿದೆ.
ನಿಮಗೆಲ್ಲ ಶುಭಾಷಯಗಳು ಎಂದು ಟ್ವೀಟ್ ಮಾಡಿದ್ದಾರೆ.