Uttara Pradesh: ಮದುವೆ ಅಂದ್ರೆ ಪತಿ- ಪತ್ನಿ ಇಬ್ಬರು ಎಲ್ಲ ವಿಷಯದಲ್ಲೂ ಅರ್ಥ ಮಾಡಿಕ“ಂಡು ಬೆಸೆಯುವ ಸಂಬಂಧ. ಪ್ರತಿದಿನ ಜಗಳವಾಡಿದ್ರೂ, ಇಬ್ಬರೂ ದೂರವಾಗದೇ ಇರೋದೇ ನಿಜವಾದ ಪ್ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಮಕ್ಕಳ ಆಟವಾಾಗಿದೆ.
ಅದರಲ್ಲೂ ಉತ್ತರಭಾರತದಲ್ಲಿ ಮದುವೆಗೆ ಸಂಬಂಧಿಸಿದ ಗಲಾಟೆ, ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ಗಳು ಹೆಚ್ಚಾಗುತ್ತಿದೆ. ಮದುವೆಯಲ್ಲಿ ಪೂರಿ ಮಾಡಿಸಿಲ್ಲವೆಂದು ಜಗಳ. ಮದುವೆಯಲ್ಲಿ ಗುಲಾಬ್ ಜಾಮೂನ್ ಮಾಡಿಸಿಲ್ಲವೆಂದು ಗಲಾಟೆ. ಇಂಥ ಸಣ್ಣ ವಿಚಾರಕ್ಕೆ ಮದುವೆಯೇ ಮುರಿದು ಬಿದ್ದ ಘಟನೆ ಹೆಚ್ಚಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ, ಖುಷಿಖುಷಿಯಾಗಿ ಮದುವೆಯಾಗಿದ್ದ ಮಧು ಮಗಳು ಮರುದಿನ ಬೆಳಿಗ್ಗೆ ಅಂದ್ರೆ ಎಸ್ಕೇಪ್ ಆಗಿದ್ಲು. ಇದೀಗ ಇನ್ನ“ಂದು ಘಟನೆ ನಡೆದಿದ್ದು, ಮದುವೆಯಾಗಿ ಕೇವಲ 20 ಗಂಟೆಯಲ್ಲೇ ಮಧು ವರನಿಗೆ ಡಿವೋರ್ಸ್ ನೀಡಿದ್ದಾಳೆ.
ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ವಿವಾಹವಾಗಿ ಪತಿಯ ಮನೆಗೆ ಹೋಗಿ ಕೇವಲ 20 ನಿಮಿಷದಲ್ಲೇ ನನಗೆ ಈ ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಭಾಲ್ವಾನಿಯ ವಿಶಾಲ್ ಮತ್ತು ಸಲೀಪುರದ ಪೂಜೆ ಎಂಬಾಕೆಯ ಮದುವೆ ನಡೆದಿತ್ತು. ಅದಾಗಿ ಆಕೆ ಪತಿಯ ಮನೆಗೆ ಹೋಗಿ 20 ನಿಮಿಷದ ಬಳಿಕ ನನಗೆ ಈ ಮದುವೆ ಬೇಡ, ನನ್ನ ಹೆತ್ತವರನ್ನು ಕರೆಸಿ ಎಂದು ಜಗಳವಾಡಿದ್ದಾಳೆ.
ಆಕೆಯ ಮನವೋಲಿಸಲು ಗಂಡಿನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ,ಆಕೆ ಅವರ್ಯಾರ ಮಾತನ್ನು ಕೇಳಲಿಲ್ಲ. ಹಾಗಾಗಿ ಆಕೆ ಹೆತ್ತವರನ್ನು ಕರೆಯಬೇಕಾಯಿತು. ನಂತರ ಆಕೆಯ ಪೋಷಕರು ಬಂದು ಮದುವೆ ನಿರಾಕರಿಸಲು ಕಾರಣವೇನು ಎಂದು ಕೇಳಿದರೂ ಕೂಡ ಆಕೆ ಅದಕ್ಕೆ ಕಾರಣವೇ ನೀಡಲಿಲ್ಲ.
ಹೀಗಾಗಿ ಆ ರಾತ್ರಿ ಫಸ್ಟ್ ನೈಟ್ ಮಾಡಬೇಕಿದ್ದ ವರ, ಆಕೆಯ ಡಿವೋರ್ಸ್ ನೋಟೀಸ್ಗೆ ಸಹಿ ಹಾಕಿದ್ದಾನೆ. ಅಲ್ಲದೇ ಮದುವೆ ಸಮಯದಲ್ಲಿ ನೀಡಿದ್ದ, ಪಡೆದಿದ್ದ ಎಲ್ಲ ವಸ್ತುಗಳನ್ನು ಪರಸ್ಪರ ಹಿಂದಿರುಗಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ವರ, ಆಕೆಯಿಂದಾಗ ಮನೆ ಮರ್ಯಾದೆ ನಾಶವಾಗಿದೆ ಎಂದು ಬೆಸರ ವ್ಯಕ್ತಪಡಿಸಿದ್ದಾನೆ.
UP Deoria: Bride Pooja spent just 20 mins at in-laws' house, refused to stay, demanded divorce. After 5-hr talks, groom Vishal signed divorce papers same night instead of suhaagraat. pic.twitter.com/Kg73Xqie7C
— Ghar Ke Kalesh (@gharkekalesh) December 1, 2025

