Uttara Pradesh: ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿರುವ ಕೆಲಸವೇನು ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Uttara Pradesh: ಸದ್ಯ ಬಂಗಾರದ ದರ ಯಾವ ರೇಂಜಿಗೆ ಹೆಚ್ಚಾಗಿದೆ ಅಂದ್ರೆ, 1 ಗ್ರಾಮ್ ಬಂಗಾರ ಖರೀದಿಸುವುದಕ್ಕೂ ಸಾವಿರ ಸಾವಿರ ರೂಪಾಯಿ ಬೇಕು. ಅಂಥದ್ರಲ್ಲಿ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿ ಯಾವುದೋ ತಿಂಡಿ ತಿನ್ನುವುದಕ್ಕಾಗಿ, ನಿಮ್ಮ ಮನೆಯಲ್ಲಿದ್ದ  85 ಲಕ್ಷ ಬೆಲೆ ಬಾಳುವ ಚಿನ್ನ ತೆಗೆದುಕ“ಂಡು ಹೋಗಿ, ಅಂಗಡಿಯವರಿಗೆ ನೀಡಿದರೆ ನಿಮಗೆ ಹೇಗಾಗಬೇಡಾ..?

ಇದು ಯಾವುದೋ ಕಥೆಯಲ್ಲ. ಸತ್ಯವಾಗಿ ನಡೆದಿರುವುದು. ಉತ್ತರಪ್ರದೇಶದ ಡಿಯೋರಿಯಾ ಎಂಬಲ್ಲಿ ಈ ಘಟನೆ ನಡೆದಿದ್ದು, 30ರಿಂದ 40 ರೂಪಾಯಿ ಮೊಮೊ ತಿನ್ನಬೇಕು ಎಂದು ಓರ್ವ ಬಾಲಕ, ತನ್ನ ಮನೆಯಲ್ಲಿರುವ ಚಿನ್ನವನ್ನು ಮೊಮೊ ಅಂಗಡಿಯವರಿಗೆ ನೀಡಿದ್ದಾನೆ.

ಈ ಬಾಲಕನ ತಂದೆ ವಾರಣಾಸಿಯಲ್ಲಿ ಅರ್ಚಕರಾಗಿರುವ ವಿಮ್ಲೇಶ್ ಮಿಶ್ರಾ, ತನ್ನ ಮಗನಿಗೆ ಮೋಮೋಸ್ ಎಂದರೆ ಇಷ್ಟ ಎಂದಿದ್ದಾರೆ. ಇದನ್ನೇ ಬಳಸಿದ ಅಂಗಡಿಯವರು ಚಿನ್ನ ಪಡೆಯುವ ಐಡಿಯಾ ಮಾಡಿದ್ದಾರೆ.

ಇನ್ನು ಯಾಕೆ ಆತ ಮನೆಯಲ್ಲಿರುವ ಚಿನ್ನ ನೀಡಿದ ಎಂದರೆ, ಇವನ ಮನೆಯ ಬಳಿ ಮೊಮೊ ಅಂಗಡಿ ಹಾಕಿದ್ದ ಮೂವರು ಯುವಕರು ಸೇರಿ, ಈ ಬಾಲಕನಿಗೆ ಫ್ರೀಯಾಗಿ ಮೊಮೊ ನೀಡುತ್ತೇವೆ. ನಿನ್ನ ಮನೆಯಲ್ಲಿರುವ ಚಿನ್ನ ತೆಗೆದುಕ“ಂಡು ಬಾ ಎಂದು ಆಸೆ ತೋರಿಸಿದ್ದಾರೆ.

ಬಾಲಕನಿಗೆ ಚಿನ್ನದ ಬೆಲೆ ತಿಳಿದಿರದ ಕಾರಣ, ಆತ ಫ್ರೀ ಮೊಮೊ ಆಸೆಗಾಗಿ ಮನೆಯಲ್ಲಿರುವ ಚಿನ್ನವನ್ನು ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಮೊಮೊ ಅಂಗಡಿ ಯುವಕರಿಗೆ ನೀಡಿದ್ದಾನೆ. ಅವರು ಪ್ರತಿದಿನ ಸ್ವಲ್ಪ ಸ್ವಲ್ಪ ಚಿನ್ನ ಪಡೆದು, ಪ್ರತಿದಿನ ಫ್ರೀಯಾಗಿ ಮೊಮೊ ನೀಡಿದ್ದಾರೆ. ಹೀಗೆ 85 ಲಕ್ಷ ರೂಪಾಯಿ ಚಿನ್ನ ಪಡೆದು ಮೋಸ ಮಾಡಲಾಗಿದೆ.

ಆದರೆ ಆ ವರೆಗೂ ಅವರಿಗೆ ಬಾಲಕ ಮನೆಯಿಂದ ಚಿನ್ನ ತೆಗೆದು ಅಂಗಡಿಯವರಿಗೆ ನೀಡುತ್ತಿದ್ದಾನೆಂದು ತಿಳಿದೇ ಇರಲಿಲ್ಲ. ಬಳಿಕ ವಿಮ್ಲೇಶ್ ಸಹೋದರಿಯ ಮನೆಗೆ ಹೋದಾಗ, ಆ ಬಾಲಕ ಅವರ ಬಳಿ ಚಿನ್ನ ಕೇಳಿದಾಗ, ಸತ್ಯ ಆಚೆ ಬಂದಿದೆ. ಬಳಿಕ ಮನೆಗೆ ಬಂದು ಕಪಾಟ ತೆರೆದು ನೋಡಿದಾಗ ಚಿನ್ನವಿಲ್ಲದಿರುವುದು ತಿಳಿದಿದೆ. ಬಾಲಕನ ಬಳಿ ಕೇಳಿದಾಗ, ತಾನು ತಿಂಡಿ ತಿನ್ನಲು ಚಿನ್ನ ಅಂಗಡಿಯವರಿಗೆ ನೀಡಿದ್ದು, ಅವರು ತನಗೆ ಪ್ರತಿದಿನ ಫ್ರೀಯಾಗಿ ತಿಂಡಿ ನೀಡುತ್ತಿದ್ದರು ಎಂದಿದ್ದಾನೆ.

ಬಳಿಕ ಆತನ ಪೋಷಕರು ಪೋಲೀಸರ ಬಳಿ ಈ ಬಗ್ಗೆ ದೂರು ನೀಡಿದ್ದು, ಪೋಲೀಸರು ತನಿಖೆ ಆರಂಭಿಸಿದ್ದಾರೆ.

About The Author