Wednesday, December 3, 2025

Latest Posts

Uttara Pradesh News: ಮದುವೆಯಲ್ಲಿ ಖುಷಿ ಖುಷಿಯಾಗಿ ಭಾಗವಹಿಸಿ, ಮಧ್ಯರಾತ್ರಿ ಎಸ್ಕೇಪ್ ಆದ ವಧು

- Advertisement -

Uttara Pradesh News: ಮದುವೆಯಾದ ಮಧ್ಯರಾತ್ರಿಯೇ ವಧು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಬಾರಬಂಕಿಯಲ್ಲಿ ಈ ಘಟನೆ ನಡೆದಿದ್ದು, 3 ತಿಂಗಳ ಹಿಂದೆ ಪಲ್ಲವಿ ಮತ್ತು ಸುನೀಲ್ ಎಂಬುವವರ ಮದುವೆ ನಿಶ್ಚಯವಾಗಿತ್ತು.

ಹಾಗಾಗಿ ಮಂಗಳವಾರ ಮದುವೆ ನಡೆದಿದ್ದು, ರಾತ್ರಿ ಮದುವೆ ಕಾರ್ಯಕ್ರಮವೆಲ್ಲಾ ಮುಗಿದಿದೆ. ಅಲ್ಲಿಯವರೆಗೂ ವಧು ಪಲ್ಲವಿ ಎಲ್ಲ ಮದುವೆ ಕಾರ್ಯಗಳಲ್ಲಿ ಭಾಗವಹಿಸಿ, ಡಾನ್ಸ್ ಮಾಡಿ ಚೆನ್ನಾಗಿ ಎಂಜಾಯ್ ಮಾಡಿದ್ದಾಳೆ. ಆದರೆ ಬೆಳಿಗ್ಗೆ ವರನ ಮನೆಗೆ ವಧುವನ್ನು ಬೀಳ್ಕೋಡಬೇಕು ಎನ್ನುವ ಸಂದರ್ಭದಲ್ಲಿ ವಧು ಎಸ್ಕೇಪ್ ಆಗಿದ್ದಾಳೆ.

ಇಲ್ಲೇ ಎಲ್ಲೋ ಹೋಗಿರಬಹುದು ಎಂದು ಮನಯವರೆಲ್ಲ ಸುಮ್ಮನಿದ್ದರು. ಬಳಿಕ 1 ಗಂಟೆ ಹುಡುಕಿದರೂ ಆಕೆ ಸಿಗಲಿಲ್ಲ. ಮಧ್ಯಾಹ್ನದವರೆಗೂ ಹುಡುಕಿ ವಧು ಸಿಗದಿದ್ದಾಗ, ದೂರು ನೀಡಲಾಗಿದೆ.

ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಪ್ರಿಯಕರನ ಜತೆ ವಧು ಓಡಿಹೋಗಿರಬಹುದು ಎಂದು ಅವರು ಶಂಕಿಸಿದ್ದಾರೆ. ಅಲ್ಲದೇ ಆಕೆಯ ಸೆಲ್ ಫೋನ್ ಟ್ರ್ಯಾಕ್ ರೆಕಾರ್ಡ್ ಮಾಡಿದ್ದಾರೆ. ವರನ ಕುಟುಂಬದವರು ವಧುವಿನ ಮನೆಯವರ ವಿರುದ್ಧ ದೂರು ನೀಡಿದ್ದಾರೆ.

- Advertisement -

Latest Posts

Don't Miss