Uttara Pradesh: ಯೋಗಿಜಿ ನಮ್ಮನ್ನು ಕ್ಷಮಿಸಿ ಎಂದು ಪೋಸ್ಟರ್ ಹಿಡಿದು ಠಾಣೆಗೆ ಬಂದ ರೌಡಿಗಳು

Uttara Pradesh: ರೌಡಿ, ದುಷ್ಕರ್ಮಿಗಳು, ದರೋಡೆಕೋರರು, ರೆಪಿಸ್ಟ್‌ಗಳ ತವರಾಗಿದ್ದ ಉತ್ತರಪ್ರದೇಶ, ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಅದೆಷ್ಟು ಬದಲಾವಣೆ ಕಂಡಿದೆ ಎಂದು ನೀವೇ ಹಲವು ವರ್ಷಗಳಿಂದ ನೋಡುತ್ತಿದ್ದೀರಿ.

ಇದೀಗ ಯೋಗಿ ಇನ್ನೂ ಹೆಚ್ಚಿನ ಬದಲಾವಣೆ ತಂದು ರಾಜ್ಯದಲ್ಲಿ ಶಿಸ್ತು ಕಾಪಾಡಲು ನಿರ್ಧರಿಸಿದ್ದು, ಜಿರೋ ಟಾಲರೆನ್ಸ್ ರೂಲ್ಸ್ ಜಾರಿಗೆ ತರಲು ಮುಂದಾಗಿದ್ದಾರೆ. ಅಲ್ಲದೇ, ಮಿತಿ ಮೀರಿದ್ರೆ, ಸರಿಯಾದ ಕ್ರಮ ತೆಗೆದುಕ“ಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅದರ ಪರಿಣಾಮ ರೌಡಿಗಳ ಮೇಲೆ ಯಾವ ರೀತಿ ಬೀರಿದೆ ಅಂದ್ರೆ, ರೌಡಿಗಳು ಯೋಗಿಜಿ ನಮ್ಮನ್ನು ಕ್ಷಮಿಸಿ ಎಂದು ಬರೆದು, ಪೋಸ್ಟ್ ಹಿಡಿಯುವ ರೇಂಜಿಗೆ.

ಹೌದು.. ಗಾಜಿಯಾಬಾದ್‌ನಲ್ಲಿ ಇತ್ತೀಚೆಗೆ ಸೂರ್ಯ ಎಂಬ ಯುವಕನ ಹತ್ತೆಯಾಗಿತ್ತು. ಬಕ್ರೀದ್ ಹಬ್ಬದ ದಿನವೇ, ಮುಸ್ಲಿಂ ಯುವಕ ಈ ದುಷ್ಕೃತ್ಯ ಎಸಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕ“ಂಡ ಪೋಲೀಸರು, ಆಪೇರಷನ್ ಕ್ಲೀನ್ ಸ್ವೀಪ್ ಎಂಬ ಅಭಿಯಾನ ಶುರು ಮಾಡಿದರು.

ಈ ಅಭಿಯಾನದ ಅಂಗವಾಗಿ ಸುಮಾರು 150 ಹಳೆಯ ಅಪರಾಧಿಗಳು, ರೌಡಿಗಳನ್ನು ಸ್ಟೇಶನ್‌ಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಆದರೆ ಯೋಗಿಜಿ ಕ್ರಮದ ಬಗ್ಗೆ ಹೆದರಿಕೆ ಇದ್ದ ರೌಡಿಗಳು ತಾವೇ ಮನೆಯಿಂದಲೇ ಯೋಗಿಜಿ ನಮ್ಮನ್ನು ಕ್ಷಮಿಸಿ ಎಂಬ ಪೋಸ್ಟರ್ ಬರೆದು ಹಿಡಿದು ತಂದಿದ್ದರು. ಅದರಲ್ಲಿ ಕ್ಷಮೆಯಾಚನೆಯೂ ಇತ್ತು.

ಈ ಎಲ್ಲ ರೌಡಿಗಳನ್ನು ಸಾಲಾಗಿ ನಿಲ್ಲಿಸಿ, ಮತ್ತೆ ಇನ್ಯಾವುದೇ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಲಾಗಿದೆ. ಅಲ್ಲದೇ, ಮುಂದೆ ಸಣ್ಣ ತಪ್ಪಾದರೂ ಸರಿಯಾದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ಇವರ ಅಪರಾಧಗಳನ್ನು ಪಟ್ಟಿ ಮಾಡಿ ಇಡಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಯೋಗಿಜಿ ನಡೆಗೆ ಮತ್ತು ಉತ್ತರಪ್ರದೇಶದ ಪೋಲೀಸರ ನಡೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.

About The Author