Uttar Pradesh: ಸಾಕು ನಾಯಿ ಅನಾರೋಗ್ಯಕ್ಕೀಡಾಗಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಸಹೋದರಿಯರು.

Uttar Pradesh: ತಾವು ಸಾಕಿದ್ದ ನಾಯಿಗೆ ಅನಾರೋಗ್ಯ ಬಾಧಿಸಿ, ಅದು ಸುಧಾರಣೆಯಾಗದ ಕಾರಣ, ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ರಾಧಾ ಸಿಂಗ್(24) ಮತ್ತು ಜಿಯಾ ಸಿಂಗ್(22) ಮೃತ ಸಹೋದರಿಯರಾಗಿದ್ದಾರೆ. ಇವರಿಬ್ಬರು ಟೋನಿ ಎಂಬ ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಿದ್ದರು. ಆದರೆ ಆ ನಾಯಿಗೆ ಅನಾರೋಗ್ಯ ಸಂಭವಿಸಿದ್ದು, ಆ ನಾಯಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರೂ, ಆ ನಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ.

ಹಾಗಾಗಿ ನಾಯಿ ಸಾಯುವ ಮುನ್ನ ನಾವೇ ಸಾಯಬೇಕು ಎಂದು ನಿರ್ಧರಿಸಿ, ಇಬ್ಬರೂ ಫಿನಾಯಿಲ್ ಸೇವಿಸಿದ್ದಾರೆ. ರಾಧಾ ಸಿಂಗ್ ಮಾರ್ಗ ಮಧ್ಯೆ ಸಾವನ್ನಪ್ಪಿದರೆ, ಜಿಯಾ ಸಿಂಗ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ, ತಾವು ಫಿನಾಯಿಲ್ ಕುಡಿದಿರುವುದಾಗಿ ಮತ್ತು ನಾವಿಬ್ಬರು ಸತ್ತ ಬಳಿಕ ನಾಯಿಯನ್ನು ಚೆನ್ನಾಗಿ ನೋಡಿಕ“ಳ್ಳಬೇಕು. ಅದನ್ನು ಮನೆಯಿಂದ ಆಚೆ ಹಾಕಬಾರದೆಂದು ಸಹೋದರಿಯರು ತಾಯಿಯ ಬಳಿ ಬೇಡಿದ್ದರಂತೆ.

ಜರ್ಮನ್ ಷೆಫರ್ಡ್ ನಾಯಿ ಸಾಕಲು ತಿಂಗಳಿಗೆ ಸಾವಿರ ಸಾವಿರ ಖರ್ಚು ಮಾಡಬೇಕಾಗುತ್ತದೆ. ಅಲ್ಲದೇ, ಆ ನಾಯಿ ಕೈಗೆ ಸಿಕ್ಕ ಎಲ್ಲ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತದೆ. ಆದರೆ ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಮನೆಯ ಜನರು ಅಷ್ಟು ಶ್ರೀಮಂತರಲ್ಲ.

ತಂದೆ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಾಯಿಗೆ ವಯಸ್ಸಾಗಿದೆ. ತಮ್ಮ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿಹೋಗಿದ್ದಾನೆ. ಅಣ್ಣ ಓರ್ವ ಈಗ ಬದುಕಿದ್ದಾನೆ. ಇದೀಗ ಈ ಸಹೋದರಿಯರು ಈ ರೀತಿ ಮಾಡಿದ್ದು, ತಂದೆ ತಾಯಿಯನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ. ಸಹೋದರಿಯರು ನಾಯಿಯ ಬಗ್ಗೆ ಯೋಚಿಸುವುದರ ಬದಲು ತಂದೆ ತಾಯಿ ಬಗ್ಗೆ ಯೋಚಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನೋದು ಹಲವರ ಅಭಿಪ್ರಾಯವಾಗಿದೆ.

About The Author