Uttara Pradesh: ಉತ್ತರಪ್ರದೇಶದ ಬರೇಲಿಯಲ್ಲಿ ಮದುವೆ ಮಂಟಪದಲ್ಲೇ ವಿವಾಹ ಕ್ಯಾನ್ಸಲ್ ಆಗಿರುವ ಘಟನೆ ನಡೆದಿದೆ. ವಿವಾಹ ಕ್ಯಾನ್ಸಲ್ ಆಗಲು ವಧು ತೆಗೆದುಕ“ಂಡ ಉತ್ತಮ ನಿರ್ಧಾರವೇ ಕಾರಣ ಎನ್ನಲಾಗಿದೆ.
ಆಗಿದ್ದೇನು..?
ಬರೇಲಿಯ ಓರ್ವ ಯುವಕ ಮತ್ತು ಯುವತಿಯ ವಿವಾಹ ನಿಶ್ಚಯವಾಗಿ ಮೇನಲ್ಲಿ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ಮದುವೆ ದಿಬ್ಬಣ ಮನೆಯ ತನಕ ಬಂದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ, ಮದುವೆಯೇ ಕ್ಯಾನ್ಸಲ್ ಆಗಿದೆ.
ಮಧುಮಗ ವರದಕ್ಷಿಣೆಯಾಗಿ ವಧುವಿನ ತಂದೆ ಬಳಿ 20 ಲಕ್ಷ ರೂಪಾಯಿ ಮತ್ತು 1 ಬ್ರೇಜಾ ಕಾರ್ ಕೇಳಿದ್ದಾನೆ. ಅದನ್ನು ನೀಡಲಾಗದಿದ್ದ ಕಾರಣ, ಮದುವೆ ಮನೆಯಲ್ಲೇ ವಧುವಿನ ತಂದೆ ಮತ್ತು ಸಹೋದರರಿಗೆ ಅವಮಾನಿಸಿದ್ದಾನೆ. ಅಲ್ಲದೇ, ಇವೆರಡು ನೀಡುವವರೆಗೂ ತಾಳಿ ಕಟ್ಟುವುದಿಲ್ಲವೆಂದು ಹೇಳಿದ್ದಾನೆ.
ಈ ಕಾರಣಕ್ಕೆ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದು, ನನ್ನ ತಂದೆ ಮತ್ತು ನನ್ನ ಸಹೋದರರನ್ನು ಎಲ್ಲರೆದುರು ಅವಮಾನಿಸುವ, ನನ್ನ ಮನೆಯವರನ್ನು ಗೌರವಿಸದ ವರನನ್ನು ನಾನು ಮದುವೆಯಾಗುವುದಿಲ್ಲ ಎಂದು ವಧು ನಿರ್ಧಾರಕ್ಕೆ ಬಂದು, ಮದುವೆ ಕ್ಯಾನ್ಸಲ್ ಮಾಡಿದ್ದಾಳೆ.
ಘಟನೆ ನಡೆದ ಬಳಿಕ, ಪೋಲೀಸರು ಸ್ಥಳಕ್ಕೆ ಧಾವಿಸಿ, ವಿಚಾರಣೆ ನಡೆಸಿದ್ದಾರೆ. ನಿಶ್ಚಿತಾರ್ಥದಲ್ಲಿ ವಧುವಿನ ಫ್ಯಾಮಿಲಿ 3 ಲಕ್ಷ ರೂಪಾಯಿ ಖರ್ಚು ಮಾಡಿದೆ. ಜತೆಗೆ ವರನಿಗೆ ಚಿನ್ನದ ಉಂಗುರ, ಸರ, 5 ಲಕ್ಷ ರೂಪಾಯಿ ನಗದು ನೀಡಲಾಗಿದೆ. ಇದರ ಜತೆ ವರ ದಕ್ಷಿಣೆ ಎಂದು ಫ್ರಿಜ್, ವಾಶಿಂಗ್ ಮಶಿನ್, ಏರ್ ಕೂಲರ್, ಗೃಹೋಪಯೋಗಿ ವಸ್ತುಗಳು, 1ಲಕ್ಷಕ್ಕೂ ಹೆಚ್ಚು ಹಣವನ್ನು ವಧುವಿನ ಕಡೆಯವರು ನೀಡಿದ್ದಾರೆನ್ನಲಾಗಿದೆ.
ಆದರೂ ಕೂಡ ಈ ವ್ಯಕ್ತಿಗೆ ಹಣದ ದಾಹ ತೀರದೇ, ಆತ ಮದುವೆಗೆ ಮತ್ತೆ 20 ಲಕ್ಷ ದುಡ್ಡು ಮತ್ತು ಬ್ರಿಜಾ ಕಾರ್ ಕೇಳಿದ್ದಾನೆ. ನೀಡದಿದ್ದಾಗ, ಮದುವೆ ಮನೆ ಅನ್ನೋದು ನೋಡದೇ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
In UP's Bareilly, a wedding was called off at the last moment allegedly over dowry demand of Rs 20 lakhs and a Brezza car. pic.twitter.com/Qk9zRCdPsK
— Piyush Rai (@Benarasiyaa) December 13, 2025




