Thursday, October 16, 2025

Latest Posts

ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು

- Advertisement -

www.karnatakatv.net : ಬೆಳಗಾವಿ: ಮೊದಲಿನಿಂದಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ  ಅನ್ಯಾಯವನ್ನು ಸರಿಪಡಿಸಲು ಸಿಎಂ ಬಸವರಾಜ ಬೋಮ್ಮಾಯಿ  ಅವರಿಗೆ ಉತ್ತರ ಕರ್ನಾಟಕ ಶಾಸಕರು ಪಕ್ಷ ಭೇದ ಮರೆತು ಬೆಂಬಲಿಸಬೇಕು ಎಂದು ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮಗೆ ಮೊದಲಿನಿಂದಲೂ ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿ ಆಗ್ತಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿಲ್ಲ ಎಂಬ ಕೂಗು ಇದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು  ಸರಿಪಡಿಸಬೇಕು ಕೆಲಸ ಆಗಬೇಕು ಎಂದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇವತ್ತಿನವರೆಗೂ ಕಾರ್ಯ ಚಟುವಟಿಕೆ ಇಲ್ಲ.‌ ಮುಂಬರುವ ದಿನಗಳಲ್ಲಿ ಸೌಧದಲ್ಲಿ ನಿರಂತರವಾಗಿ ಕೆಲಸ‌ ಕಾರ್ಯಗಳು ಚಟುವಟಿಕೆ ನಡೆಯಬೇಕು. ಅದಕ್ಕಾಗಿ ಪ್ರಮುಖ ಕಚೇರಿಗಳನ್ನ ಸ್ಥಳಾಂತರ ಮಾಡಲು ನಾವು ಸ್ವಾಮಿಗಳು ಒತ್ತಾಯ ಮಾಡುತ್ತಿದ್ದೇವೆ. ಬಹಳಷ್ಟು ಹೋರಾಟಗಾರರು ಹೋರಾಟ ಮಾಡಿದ್ದಾರೆ. ಇನ್ನಾದರೂ ಉತ್ತರ ಕರ್ನಾಟಕ ದಿಮಂತ ರಾಜಕಾರಣಿ ಬಸವರಾಜ ಬೋಮ್ಮಾಯಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು. ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎಂದರು.

ಹಾಗೇಯೆ ನಾಡಿನ ಅಭಿವೃದ್ಧಿಗಾಗಿ ಯಾವಾಗಲೂ ಮಠಾಧೀಶರು ಸಿಎಂ ಬಳಿ ಹೋಗಲು ಸನ್ನದ್ಧರಾಗಿದ್ದೇವೆ. ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಬೇಗ ಕಚೇರಿ ಸ್ಥಳಾಂತರ ಮಾಡುವ ಭರವಸೆ ಇದೇ ಮಾಡದಿದ್ದರೇ ನಾವು ನಿಯೋಗ ತೆಗೆದುಕೊಂಡು ಹೋಗಿ ಮಾಡಸ್ತೇವಿ. ಈ ಬಾರಿ ಬಸವರಾಜ ಬೋಮ್ಮಾಯಿ ಅವರು ನಮಗೆ ನಿರಾಶೆ ಮಾಡುವುದಿಲ್ಲ ಎಂಬ ನಂಬಿಕೆ ಇದ್ದು ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಲೇಬೇಕು ಎಂಬುವುದು ನಮ್ಮ ಹಕ್ಕೊತ್ತಾಯ ಎಂದರು.

ಬಸವರಾಜ ಬೋಮ್ಮಾಯಿ ಅವರಿಗೆ ಗಡಿ ಸಮಸ್ಯೆ ಬಗ್ಗೆ ಹೆಚ್ಚಾಗಿ ಗೊತ್ತಿದೆ. ಈಗ ಬೋಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ.ಈ ಹಿಂದೆ ಗಡಿ ಉಸ್ತುವಾರಿ ಸಚಿವರನ್ನಾಗಿ ಮಾಡಲು ಒತ್ತಾಯ ಮಾಡಿದ್ದೇವೆ.ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗಿಯೂ ಕೆಲಸ ಮಾಡಿದ್ದಾರೆ.

ಉತ್ತರ ಕರ್ನಾಟಕ ನಾಯಕರು ಎಲ್ಲಾ ಪಕ್ಷ ಭೇದ ಮರೆತು ಒಂದಾಗಿ ಕೆಲಸ ಮಾಡಬೇಕು. ಸಿಎಂ ಬಸವರಾಜ ಬೋಮ್ಮಾಯಿ ಅವರಿಗೆ ಉತ್ತರ ಕರ್ನಾಟಕ ಎಲ್ಲಾ ನಾಯಕರು ಬೆಂಬಲಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ನಮ್ಮ ಉತ್ತರ ಕರ್ನಾಟಕ ಶಾಸಕರು ಸಿಎಂ ಬೆಂಬಲಕ್ಕೆ ನಿಲ್ಲಬೇಕು. ಕಳೆದ ಎರಡು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ಆಗಿಲ್ಲ. ಈ ವರ್ಷವಾದ್ರು ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ಶ್ರೀಗಳ ಆಗ್ರಹಿಸಿದರು.

- Advertisement -

Latest Posts

Don't Miss