Wednesday, September 17, 2025

Latest Posts

ಅಂತರಾಷ್ಟ್ರೀಯ ಹಾಕಿಗೆ ವಿ ಸುನಿಲ್ ನಿವೃತ್ತಿ ಘೋಷಣೆ..!

- Advertisement -

www.karnatakatv.net : ಅಂತರಾಷ್ಟ್ರೀಯ ಹಾಕಿಗೆ ಕನ್ನಡಿಗ ವಿ ಸುನಿಲ್ ನಿವೃತ್ತಿ ಘೋಷಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಇಂಡಿಯನ್ ಹಾಕಿ ಟಿಂ ನ ಪ್ಲೇಯರ್ಸ್ ನಿವೃತ್ತಿ ಘೋಷಿಸುವ ಮೂಲಕ ಶಾಕ್ ಕೊಡುತ್ತಿದ್ದಾರೆ.

ಇದೀಗ ಕನ್ನಡಿಗ ಸುನಿಲ್ ಕೂಡಾ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಕಿ ತಂಡದ ತಾರೆಗಳಾದ ಫ್ಲಿಕ್ಕರ್ ರೂಪಂದರ್ ಸಿಂಗ್ ಮತ್ತು ಡಿಪೆಂಡರ್ ಬೀರೆಂದ್ರ ಲಾಕ್ರಾ ಗುರುವಾರವಷ್ಟೇ ನಿವೃತ್ತಿ ಘೋಷಿಸಿದ್ರು,

ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ ಸುನಿಲ್ ‘ನನ್ನ ದೇಹ ಹೇಳುತ್ತಿದೆ ನಾನು ಇನ್ನೂ ಆಡಬಹುದು, ಹೃದಯ ಹೇಳುತ್ತಿದೆ ಇನ್ನೂ ಹೋಗಬಹುದು ಆದರೆ ಮನಸ್ಸು ಹೇಳುತ್ತಿದೆ ನಿವೃತ್ತಿಗೆ ಇದು ಸರಿಯಾದ ಸಮಯ’ ಎಂದು ಬರೆದಿದ್ದಾರೆ.

 

- Advertisement -

Latest Posts

Don't Miss