www.karnatakatv.net : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು 2024ರ ಹೊತ್ತಿಗೆ 102 ರೈಲು ಓಡಿಸಲು ತಿರ್ಮಾನಿಸಿದೆ. ಬೆಂಗಳೂರು – ಧಾರವಾಡ ನಡುವೆ ಕೂಡ ಈ ರೈಲು ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ.
ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಸಂಚಾರವನ್ನು ಆರಂಭಿಸಿ 1ವರ್ಷ ಕಳೆದಿದೆ. ಬೆಂಗಳೂರು- ಧಾರವಾಡ ನಡುವೆ ಓಡಿಸಲು ಮನವಿಯನ್ನು ಸಲ್ಲಿಸಿದ್ದಾರೆ. ಶೇ100ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾದ ರೈಲು ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ಈ ರೈಲನ್ನು ತಯಾರಿಸಲಾಗಿದೆ.
ದೇಶದ ಅತಿ ವೇಗದ ರೈಲು ಇದಾಗಿದ್ದು, ರಾಜಧಾನಿಯಿಂದ ಉತ್ತರ ಕರ್ನಾಟಕದ ವರೆಗೆ ಕೇವಲ ಕೆಲವೇ ಗಂಟೆಗಳಲ್ಲಿ ತಲುಪಬಹುದಾಗಿದೆ. ರೈಲು ಸಂಚಾರ ಆರಂಭ ಇನ್ನೂ ಅಂತಿಮವಾಗಿಲ್ಲ. ಈ ರೈಲು ಆರಂಭ ವಾದರೆ ಅನೇಕ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಭಾರತೀಯ ರೈಲ್ವೆ 58 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ ರೈಲುಗಳನ್ನು ಓಡಿಸುವ ಗುರಿಯನ್ನು ಇಲಾಖೆ ಹೊಂದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಸಂಚಾರ ನಡೆಸಬೇಕು ಎಂಬುದು ಗುರಿಯಾಗಿದೆ.