National News: ವಂದೇ ಭಾರತ್ ಟ್ರೈನ್‌ನಲ್ಲಿ ಗಲಾಟೆ ನಡೆದಿದೆ. ಆದರೆ ಇದು ಟಿಕೇಟ್ ಬುಕ್ ಮಾಡಿ, ಸೀಟ್ ಎಕ್ಸಚೆಂಜ್ ಆಗಿರುವ ಪ್ರಯಾಣಿಕರ ಮಧ್ಯೆ ಆಗಿರುವ ಗಲಾಟೆಯಲ್ಲ. ಬದಲಾಗಿ, ಟ್ರೈನ್ ಓಡಿಸಲು ಲೋಕೋ ಪೈಲಟ್‌ಗಳ ನಡುವೆ ನಡೆದಿರುವ ಜಗಳ.
ಆಗ್ರಾ- ಉದಯಪುರ್ ವಂದೇ ಭಾರತ್ ರೈಲು ಓಡಿಸಲು ಲೋಕೋ ಪೈಲಟ್‌ಗಳು ಗಲಾಟೆ ನಡೆಸಿದ್ದಾರೆ. ಹೊಡೆದಾಡಿಕೊಂಡಿದ್ದಾರೆ. ಪ್ರತಿದಿನ ಈ ಟ್ರೈನ್ ಓಡಿಸಲು 6ಕ್ಕೂ ಹೆಚ್ಚು ಲೋಕೋ ಪೈಲಟ್‌ಗಳು ಹೊಡೆದಾಡಿಕೊಳ್ಳುತ್ತಿದ್ದು, ಇದರಿಂದ ಭಾರತೀಯ ರೈಲ್ವೆ ಇಲಾಖೆ ತೀವ್ರ ಮುಜುಗರ ಅನುಭವಿಸಬೇಕಿದೆ. ಈ ನಾಚಿಕೆಗೇಡಿನ ದೃಶ್ಯವನ್ನು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ಆಕ್ರೋಶ ಹೊರಹಾಕಿದ್ದಾರೆ.
ಮೊದಲು ಓರ್ವ ಲೋಕೋ ಪೈಲಟ್ ತನ್ನ ಸ್ಥಾನಕ್ಕೆ ಹೋಗಿ ಕುಳಿತು, ಬಾಗಿಲು ಲಾಕ್ ಮಾಡಿದ್ದಾರೆ. ಗಲಾಟೆ ಶುರುವಾದರೂ ಬಾಗಿಲು ತೆಗೆಯದ ಕಾರಣ, ಕಿಟಕಿಯಿಂದ ಕೆಲ ಲೋಕೋ ಪೈಲಟ್‌ಗಳು ನುಸುಳಿ ಗಲಾಟೆ ಶುರು ಮಾಡಿದ್ದಾರೆ. ವಿಚಿತ್ರ ಅಂದ್ರೆ, ಆ ಜಗಳವನ್ನು ವಿರೋಧಿಸಬೇಕಿದ್ದ ಪ್ರಯಾಣಿಕರು. ಆ ಜಗಳವನ್ನು ಸಪೋರ್ಟ್ ಮಾಡಿದ್ದಾರೆ. ಕಿಟಕಿಯಿಂದ ನುಸುಳುತ್ತಿದ್ದವರ ಬೆಂಬಲಕ್ಕೆ ನಿಂತಿದ್ದಾರೆ.
ಇನ್ನು ಲೋಕೋ ಪೈಲಟ್ ಸ್ಥಾನಕ್ಕಾಗಿ ಇವರೆಲ್ಲ ಈ ರೀತಿ ಹೊಡೆದಾಡಿಕೊಳ್ಳಲು ಕಾರಣವೇನೆಂದರೆ, ಆ ಸ್ಥಾನಕ್ಕಿರುವ ಅರ್ಹತೆ. ಸಾಮಾನ್ಯ ರೈಲಿನ ಲೋಕೋ ಪೈಲಟ್‌ಗಿಂತ, ವಂದೇ ಭಾರತ್ ರೈಲಿನ ಲೋಕೋ ಪೈಲಟ್ ಆದರೆ, ಗೌರವ ಹೆಚ್ಚು. ಅಲ್ಲದೇ, ಸಂಬಳ, ಭಡ್ತಿ ಎಲ್ಲವೂ ಸಿಗುತ್ತದೆ. ಈ ಕಾರಣಕ್ಕೆ ವಂದೇ ಭಾರತ್ ರೈಲನ್ನು ಓಡಿಸಲು ಇವರೆಲ್ಲ ಈ ರೀತಿ ನಾಚಿಕೆಗೆಟ್ಟು ಜಗಳವಾಡಿದ್ದಾರೆ.
ये मारामारी ट्रेन में बैठने के लिए पैसेंजर की नहीं है। ये लोको पायलट हैं, जो वंदेभारत एक्सप्रेस ट्रेन चलाने के लिए आपस में युद्ध कर रहे हैं।
आगरा से उदयपुर के बीच ट्रेन अभी शुरू हुई है। पश्चिम–मध्य रेलवे, उत्तर–पश्चिम, उत्तर रेलवे ने अपने अपने स्टाफ को ट्रेन चलाने का आदेश दे रखा… pic.twitter.com/oAgYdxNHa7
— Sachin Gupta (@SachinGuptaUP) September 7, 2024