Spiritual: ಹಬ್ಬಗಳ ಮಾಸ ಅಂತಾನೇ ಕರೆಯುವ ಶ್ರಾವಣ ಮಾಸ ಶುರುವಾಗಿದೆ. ಈಗಾಗಲೇ ನಾಗರಪಂಚಮಿ ಮುಗಿದಿದ್ದು, ವರಮಹಾಲಕ್ಷ್ಮೀ ಹಬ್ಬ ಬರುತ್ತಿದೆ. ಈ ವರ ಮಹಾಲಕ್ಷ್ಮೀ ಹಬ್ಬದ ಮಹತ್ವವೇನು..? ಈ ಹಬ್ಬವನ್ನು ಹೇಗೆ ಆಚರಿಸಬೇಕು..? ಲಕ್ಷ್ಮೀ ದೇವಿಯ ಪೂಜೆ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಖ್ಯಾತ ಜೋತಿಷಿ, ಪಂಡಿತರೂ ಆದಂಥ ಶ್ಯಾಮ್ ಪ್ರಕಾಶ್ ಶರ್ಮಾ ಅವರು ಕರ್ನಾಟಕ ಟಿವಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಮಹತ್ವದ ಬಗ್ಗೆ ಹೇಳಿದ್ದಾರೆ.
ಸಂಪತ್ತಿನ ಪ್ರತೀಕವಾದ ವರಮಹಾಲಕ್ಷ್ಮೀ ಹಬ್ಬವನ್ನು ಪದ್ಧತಿ ಪ್ರಕಾರವಾಗಿ ಮಾಡಿದಾಗ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರುತ್ತದೆ. ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಶುಕ್ರವಾರದಂದು ಮಾಡಿದಾಗ ಲಕ್ಷ್ಮೀ ಒಲಿಯುತ್ತಾಳೆ. ಹಾಗಾಗಿ ಹುಣ್ಣಿಮೆ ಸಮೀಪವಿರುವಾಗ ಶುಕ್ರವಾಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಮಾಡಲಾಗುತ್ತದೆ.
ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಅಂದ್ರೆ 5 ಗಂಟೆ 12 ನಿಮಿಷಕ್ಕೆ ಅಥವಾ ಅದಕ್ಕೂ ಮುನ್ನವೇ ಎದ್ದು, ಎಣ್ಣೆ ಸ್ನಾನವನ್ನು ಮಾಡಿ, ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಮನೆಯ ಹೆಣ್ಣು ಮಕ್ಕಳು ಲಕ್ಷ್ಮೀ ಪೂಜೆಯನ್ನು ಮಾಡಬೇಕಾಗುತ್ತದೆ. ವರಮಹಾಲಕ್ಷ್ಮೀ ಪೂಜೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕು ಎಂದಲ್ಲಿ, ವೀಡಿಯೋ ನೋಡಿ.