Thursday, December 12, 2024

Latest Posts

ಅನಧಿಕೃತವಾಗಿ ಅಳವಡಿಸಲಾಗಿದ್ದ ವೀರ ಮದಕರಿ ನಾಯಕ ನಾಮಪಲಕ ತೆರವು

- Advertisement -

www.karnatakatv.net :ಬೆಳಗಾವಿ: ನಗರದ ಆರ್‌‌ಪಿಡಿ ಸರ್ಕಲ್‌ಗೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡಿದ್ದ ಫಲಕವನ್ನು ಪೊಲೀಸರು ತೆರವುಗೊಳಿಸಿದ್ದು, ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

ನಗರದ ಆರ್ ಪಿಡಿ ಸರ್ಕಲ್ ಗೆ ಕೆಲ ವಾಲ್ಮೀಕಿ ಸಮುದಾಯದ ಯುವಕರು ಇಂದು ಬೆಳ್ಳಂಬೆಳಿಗ್ಗೆ ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆದಿರುವ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ಅಂತಾ ನಾಮಕರಣ ಮಾಡಿದ್ದರು.

ಇತ್ತ ನಾಮಪಲಕ ತೆರವು ಮಾಡಿದ್ದರಿಂದ ವಾಲ್ಮೀಕಿ ಸಮುದಾಯದ ಯುವಕರು ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ, ಸಿಆರ್ ಸೇರಿದಂತೆ ಓರ್ವ ಎಸಿಪಿ ಇಬ್ಬರು ಪಿಐ, ನಾಲ್ವರು ಪಿಎಸ್ಐಗಳು ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss