ರಾಜ್ಯ ಸುದ್ದಿಗಳು: ಏಪ್ರಿಲ್ 1 2019 ಕ್ಕಿಂತ ಮೊದಲೇ ನೊಂದಣಿಯಾದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಇನ್ನು ಮುಂದೆ ರಸ್ತೆಗೆ ಇಳಿಯಬೇಕೆಂದರೆ ಮೊದಲು ನಿಮ್ಮ ನಂಬರ್ ಪ್ಲೇಟ್ ಒಮ್ಮೆ ಪರಿಶೀಲಿಸಬೇಕಿದೆ. ಏಕೆಂದರೆ ಇನ್ನು ಮುಂದೆ HSRP ಕಡ್ಡಾಯಗೊಳಿಸಿದೆ

ಹಾಗಿದ್ರೆ ಏನಿದು HSRP ಅಂತೀರಾ (ಹೈ ಸೆಕ್ಯೂರಟಿ ರಿಜಿಸ್ಟ್ರೇಷನ್ ಪ್ಲೇಟ್) 2019 ಏಪ್ರೀಲ್ ನಂತರ ನೊಂದಾಯಿತ ವಾಹನಗಳಿಗೆ ಈ ಹೆಸರಿನ ನಂಬರ್ ಪ್ಲೇಟ್ ಜಾರಿಗೆ ತರಲಾಗಿದೆ ಆಗಿನಿಂದ ಪ್ರತಿ ವಾಹನಕ್ಕೂ ಈ ನಂಬರ್ ಪ್ಲೇಟ್ ಹಾಕಲಾಗುತ್ತಿದೆ
ಇನ್ನು ಈ ಹೆಸರಿನ ನಂಬರ್ ಪ್ಲೇಟ್ ನಿಂದ ಏನಾದರೂ ಲಾಭವಿದೆಯಾ ಅಂತ ಕೇಳುವುದಾದರೆ ತುಂಬಾನೆ ಲಾಭವಿದೆ.ಇದು ನಿಮ್ಮ ವಾಹನದ ಶಾಶ್ವತ ಗುರುತಿನ ನಂಬರ್ ಅನ್ನು ಒದಗಿಸುತ್ತದೆ.ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸುತ್ತದೆ.
ಇನ್ನು ಈ ನಂಬರ್ ಪ್ಲೇಟ್ ನಲ್ಲಿ ಲೇಸರ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿರುತ್ತದೆ. ಇದರಿಂದಾಗಿ ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದಲ್ಲಿ ನಿಮ್ಮ ವಾಹನವನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ.
ಹಾಗಿದ್ರೆ ಈ ನಂಬರ್ ಪ್ಲೇಟ್ ಅಳವಡಿಸಲು ಬೆಲೆ ಎಷ್ಟಿರಬಹುದು ಎಂದು ಕೇಳುವುದಾದರೆ ನಾಲ್ಕು ಚಕ್ರದ ವಾಹನಗಳಿಗೆ 400 ರಿಂದ 500 ರೂ ವರೆಗೆ ಬೆಲೆ ಇದೆ , ಹಾಗೂ ದ್ವಿಚಕ್ರ ವಾಹನಗಳಿಗೆ 250 ರಿಂದ 300 ಗೆ ನಂಬರ್ ಪ್ಲೇಟ್ ಅನ್ನು ಮಾಡಿಸಿಕೊಳ್ಳಬಹುದು.
ಇನ್ನು 2019 ಏಪ್ರೀಲ್ 1 ಕ್ಕಿಂತ ಮೊದಲೇ ನೊಂದಣಿಯಾದ ವಾಹನಗಳ ಸಂಖ್ಯೆ ಎಷ್ಟಿರಬಹುದು ಎಂದು ಕೇಳುವುದಾದರೆ 1.75 ಕೋಟಿ ಯಿಂದ 2 ಕೋಟಿ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ.
ಇನ್ನು ಈ ನಂಬರ್ ಪ್ಲೇಟ್ ಅನ್ನು ಅಳವಡಿಸಲು ಸಮಯವನ್ನು ನಿಗಧಿಪಡಿಸಿದ್ದು ನವೆಂಬರ್ 17 ರ ಒಳಗೆ ನಿಮ್ಮ ವಾಹನಕ್ಕೆ ಅಳವಡಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಒಂದು ವೇಳೆ ಈ ಮೇಲೆ ತಿಳಿಸಿದ ದಿನಾಂಕದೊಳಗೆ ಅಳವಡಿಸದಿದ್ದಲ್ಲಿ ದಂಡ ತೆರಬೇಕಾದೀತು ಹುಷಾರ್ ಹಾಗಿದ್ರೆ ದಂಡದ ಬಗ್ಗೇನೂ ಹೇಳ್ತಿವಿ ಕೇಳಿ. ನೀವೇನಾದರೂ ದಂಡ ಕಟ್ಟಲು ಸಿದ್ದರಿದ್ದರೆ 500 ರಿಂದ ಸಾವಿರ ಹಣವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.
Ettinahole developments: ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಡಿಸಿಎಂ
Shivaraj Tangadagi “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ
Forest :ಅರಣ್ಯ ಇಲಾಖೆ ಶೋಷಣೆ ವಿರುದ್ಧ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ..!




