Monday, December 23, 2024

Latest Posts

ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

- Advertisement -

Film news:

ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ ಡಿ ಬಾಸ್ ಪುತ್ರ ವಿನೀಶ್. ದರ್ಶನ್ ಪುತ್ರನ ವೀಕೆಂಡ್ ಪ್ಲಾನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಿದ್ರೆ ವಿನೀಶ್ ಆ ಪ್ಲಾನ್ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್….

ಜೂನಿಯರ್ ಡಿ ಬಾಸ್ ತಂದೆಯನ್ನೇ ಅನುಸರಿಸುತ್ತಿದ್ದಾರೆ. ಡಿ ಬಾಸ್ ಮಗ  ವಿನೀಶ್ ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ.  ಹೌದು ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ವಿಭಿನ್ನವಾಗಿಯೇ ಸುದ್ದಿಯಾಗುತ್ತಾರೆ. ಅದರಲ್ಲಿ ಇದೀಗ ಮುಂಚೂಣಿಯಲ್ಲಿರೋದು ದರ್ಶನ್ ಪುತ್ರ ವಿನೀಶ್. ಪ್ರಾಣಿ ಮೇಲಿನ ಪ್ರೀತಿಗೆ ವಿನೀಶ್ ಮೇಲೆ ಗೌರವ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು…

ವಿನೀಶ್ ಡಿ ಬಾಸ್ ದರ್ಶನ್ ಹಾಗು ವಿಜಯಲಕ್ಷ್ಮೀ ಪ್ರೀತಿಯ ಪುತ್ರ. ಸ್ಟಾರ್ ನಟನ ಮಗನಾಗಿದ್ದರೂ ವಿನೀ ಶ್ ತಂದೆಯಂತೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಮುದ್ದು ಹುಡುಗ. ದುರಹಂಕಾರವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಜೂನಿಯರ್ ಡಿ ಬಾಸ್ ಗೆ ವೀಕೆಂಡ್ ಎಂದರೆ ಅದೇನೋ ಒಲವು. ಆದರೆ ಯಾವುದೇ ಪಾರ್ಟಿಗೂ ಅಥವಾ ಯಾವುದೋ ಮೋಜು ಮಸ್ತಿಗೂ  ಹೋಗುವುದಕ್ಕಾಗಿ ಅಲ್ಲ ಬದಲಾಗಿ ಮೈಸೂರಿನ ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ನೀಡುವುದಕ್ಕಾಗಿ. ಅಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಕಾಲ ಕಳೆಯಲು. ಅಲ್ಲಿನ ಕುದುರೆ ಸವಾರಿ ಮಾಡಿ ಒಂದೊಮ್ಮೆ ಸುದ್ದಿಯಾಗಿದ್ದರು. ಹಾಗೆಯೇ ಈ ಬಾರಿಯೂ ಪ್ರಾಣಿ ಪ್ರೀತಿಯಿಂದಲೇ ಮತ್ತೆ ಸುದ್ದಿಯಾಗಿದ್ದಾರೆ.

ವೀಕೆಂಡ್ ನಲ್ಲಿ  ಪ್ರಾಣಿಗಳ ಜೊತೆ ಡಿ ಬಾಸ್ ಪುತ್ರ ವಿನೀಶ್ ಕಾಲ ಕಳೆದಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗೆ ವೈರಲ್  ಆಗುತ್ತಿದೆ. ಪಕ್ಷಿಗಳನ್ನು ಹಿಡಿದು ಮುದ್ದಾಡಿದ ವಿನೀಶ್ ನಂತರ ಓತಿ,ಹಾಗೆಯೇ ಬೃಹತ್ ಗಾತ್ರದ ಹಾವನ್ನು ಹಿಡಿದು ಬಹಳವಾಗಿಯೇ ನಿರ್ಭಯವಾಗಿ ಅದರ ಜೊತೆ ಆಟವಾಡಿದ್ದಾರೆ. ಸ್ನೇಹಿತರ ಜೊತೆ ಈ ರೀತಿಯಾಗಿ ಕಾಲ ಕಳೆದ ದರ್ಶನ್ ಪುತ್ರನ ಈ ವೀಡಿಯೋಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ದರ್ಶನ್ ರವರಿಗೆ ಈ ಸ್ಟೋರಿ ತಲುಪೋ ವರೆಗೂ ಶೇರ್ ಮಾಡಿ…!

ಡಿ ಬಾಸ್ ಗೆ ದೃಷ್ಟಿ ತೆಗೆಯಲು ಪಾದಯಾತ್ರೆ ಕೈಗೊಂಡ ಅಭಿಮಾನಿ..!

ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!

- Advertisement -

Latest Posts

Don't Miss