Mysore News: ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ತಿರುವನ್ನು ಪೆಡೆಯುತ್ತಿದೆ. ಕೆಲವರು ಇದು ಧರ್ಮ ಕಾರಣಕ್ಕಾಗಿ ನಡೆದ ಹತ್ಯೆ ಎಂದರೆ ಅನೇಕರು ಇದೊಂದು ವೈಶಮ್ಯದ ಹತ್ಯೆ ಎಂಬುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಇದು ಒಂದು ಧರ್ಮಕ್ಕಾಗಿ ನಡೆದ ಹತ್ಯೆ. ದರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆರದಿದೆ. ಅವರು ಹನುಮ ಜಯಂತಿ ಆಚರಿಸಿದ್ರು ಈ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಿದ್ರು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇಲ್ಲವಾದರೆ ನಾನು ನನ್ನ ಮಗಳು ನಮಗೆ ನಾವೇ ಶಿಕ್ಷೆ ಕೊಟ್ಟುಕೊಳ್ಳುತ್ತೇವೆ.
ಇವತ್ತು ನನ್ನ ಗಂಡ ಹನುಮ ಜಯಂತಿ ಮಾಡಿದರು. ಅವರ ಕೊಲೆಯಾಯಿತು. ನಾಳೆ ನಾನು ಆಚರಿಸುತ್ತೇನೆ ನನ್ನನ್ನೂ ಕೊಲೆ ಮಾಡುತ್ತಾರೆ. ಮುಂದೆ ನನ್ನ ಮಗಳು ಆಚರಿಸುತ್ತಾಳೆ ಅವಳನ್ನು ಕೊಲೆ ಮಾಡುತ್ತಾರೆ. ಒಟ್ಟಾರೆ ಇದೊಂದು ಧರ್ಮಕ್ಕಾಗಿ ನಡೆದಂತಹ ಕೊಲೆ ಎಂಬುವುದಾಗಿ ಆರೋಪಿಸಿದರು.