ಮೈಸೂರು: ಭಾನುವಾರ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲುಕಿನಲ್ಲಿ ಪೋಟೊ ವಿಚಾರವಾಗಿ ಹನುಮನ ಜಯಂತಿ ದಿನ ಆಗಿರುವ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾದ ವಿಚಾರವಾಗಿ ಕುಟುಂಬಸ್ಥರನ್ನು ಬೇಟಿ ಮಾಡಿದ ಮಾಜಿ ಸಚಿವರಾದ ಬಿ.ಶ್ರೀ ರಾಮುಲು ಅವರು ಕುಟುಂಬಸ್ಥರಿಗೆ ಸಾಂತ್ವಾನ ದೈರ್ಯ ತುಂಬಿದರು.
ಬಳಿಕೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇವರಿಗೆ ಅನ್ಯಾಯವಾಗಿದೆ. ಇದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾರಿಗೂ ಶಿಕ್ಷೆ ಆಗಬೇಕು ನಾವೆಲ್ಲ ಹೋರಾಟ ಮಾಡುತ್ತೇವೆ ಎಂದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ವೇಣುಗೋಪಾಲ್ ಅವರ ಮೊಬೈಲ್ ಪರಿಶೀಲಿಸಿದರೆ ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ತಿಳಿಯುತ್ತದೆ ಇದು ಧರ್ಮದ ವಿಚಾರವಾಗಿ ನಡೆದಿರುವ ಕೊಲೆ ಅವರು ಯಾವುದೇ ಕ್ರಿಮಿನಲ್ ವ್ಯಕ್ತಿ ಅಲ್ಲ. ಧರ್ಮ ಅಂತ ಬಂದಾಗ ನಾವೆಲ್ಲ ಒಂದೇ ಪಕ್ಷ ಬೇದ ಮರೆತು ಹೋರಾಟ ಮಾಡುತ್ತೇವೆ ಕೊಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಯಾರ ಕುಮ್ಮಕ್ಕು ಇದೆ ಎಂದು ತಿಳಿಯುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನುನು ಸುವ್ಯವಸ್ಥೆ ಹಾಳಾಗಿದೆ.ಕಾಂಗ್ರೆಸ್ ಸರ್ಕಾರದಿಂದಾಗಿ ಯಅರಿಗೂ ರಕ್ಷಣೆ ಇಲ್ಲದಂತಾಗಿದೆ.